ಪರಿಸರ ಹಾಗೂ ಭೂಮಿ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ‘ವಿಶ್ವ ಭೂಮಿ ದಿನ’ವನ್ನುಆಚರಿಸಲಾಗುತ್ತಿದ್ದು ಅದನ್ನು ಕಾರ್ಯಾಚರಣೆಗೆ ತರಬೇಕಾಗಿದೆ.ಅಭಿವೃದ್ಧಿಯ ದುರಾಸೆಯಿಂದ ಭೂಮಿಯನ್ನು ನಾಶಪಡಿಸಿದರೆ ಕೊನೆಗೆ ಆಪತ್ತು ಕಟ್ಟಿಟ್ಟ ಬುತ್ತಿ. ಹುಟ್ಟಿನಿಂದ ಸಾವಿನವರೆಗೂ ಮಣ್ಣಿನಲ್ಲೇ ಬದುಕುವ ನಾವು ಇದನ್ನೆಲ್ಲ ಮನದಟ್ಟು ಮಾಡಿಕೊಳ್ಳುವುದರ ಮೂಲಕ ಭೂ ಸಂರಕ್ಷಣೆ ಮಾಡಬೇಕು.
ಪಂಚಮಹಾಭೂತಗಳಲ್ಲಿ ಒಂದಾದ ಪೃಥ್ವಿ ಅಥವಾ ಭೂಮಿಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.ಪ್ರಾಕೃತಿಕ ಮಣ್ಣನ್ನು ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದು
ಅದರಲ್ಲಿ ಹಲವಾರು ಔಷಧೀಯ ಅಂಶಗಳು ಅಡಗಿವೆ ಎಂಬುದನ್ನು ನ್ಯಾಚರೋಪತಿ ಸ್ಪಷ್ಟಪಡಿಸಿದೆ. ಕಡಿಮೆ ಖರ್ಚಿನಲ್ಲಿ ಈ ಚಿಕಿತ್ಸೆಯನ್ನು ಪಡೆದುಕೊಳ್ಳುವುದರೊಂದಿಗೆ ಹಲವು ರೋಗಗಳನ್ನು ನೀಗಿಸಿಕೊಳ್ಳಬಹುದು.
ಚಿಕಿತ್ಸೆಗಾಗಿ ಬಳಸುವ ಮಣ್ಣನ್ನು ಭೂಮಿಯ 3-4 ಆಳದಿಂದ ತೆಗೆದು ಬಳಸುವ ಮೊದಲು ಅದನ್ನು ಒಣಗಿಸಿ,ಪುಡಿ ಮಾಡಿ, ಕಲ್ಲು ಹಾಗೂ ಇನ್ನಿತರ ಕಲುಷಿತ ವಸ್ತುಗಳನ್ನು ವಿಭಜಿಸಿ, ಸ್ವಚ್ಛ ಮಣ್ಣನ್ನು ಆಯ್ಕೆ ಮಾಡಲಾಗುತ್ತದೆ.ಅದರ ಕಪ್ಪು ವರ್ಣವು ಸೂರ್ಯನಿಂದ ಬರುವ ಎಲ್ಲಾ ವರ್ಣಗಳನ್ನು ಹೀರಿಕೊಂಡು ಅವುಗಳನ್ನು ದೇಹಕ್ಕೆ ತಲುಪಿಸುತ್ತದೆ.ಮಣ್ಣನ್ನು ಚಿಕಿತ್ಸೆಗಾಗಿ ಎರಡು ರೀತಿಯಾಗಿ ಬಳಸಿಕೊಳ್ಳಲಾಗುತ್ತದೆ.1. ನೇರವಾಗಿ ದೇಹದ ಮೇಲೆ ಲೇಪಿಸುವುದು 2.ಮಣ್ಣನ್ನು ಬಟ್ಟೆಯಲ್ಲಿ ಕಟ್ಟಿದೇಹದ ಮೇಲೆ ಪಟ್ಟಿಯಂತೆ ಸುತ್ತುವುದು.
ಚಿಕಿತ್ಸಾ ಪ್ರಯೋಜನಗಳು:
• ಸೈನುಸೈಟಿಸ್, ತಲೆನೋವು ಕಂಡುಬಂದಲ್ಲಿ ಹಣೆಯ ಮೇಲ್ಭಾಗಕ್ಕೆ ಮಣ್ಣಿನ ಲೇಪ ಮಾಡುವುದರಿಂದ ತಕ್ಷಣವೇ ನೋವು ಶಮನವಾಗುತ್ತದೆ.
•ಪ್ರತಿದಿನ 20 ನಿಮಿಷ ಮಣ್ಣಿನ ಪಟ್ಟಿ ಅಂದರೆ ಒಂದು ತೆಳು ಒದ್ದೆಯಾದ ಮಸ್ಲಿನ್ ಬಟ್ಟೆಯಲ್ಲಿ ನೆನೆಸಿದ ಮಣ್ಣನ್ನು ಹರಡಿ ಹೊಟ್ಟೆಯ ಮೇಲೆ ಇಟ್ಟರೆ ಚಯಾಪಚಯ ಕ್ರಿಯೆಯು ಸುಲಭವಾಗಿ ನಡೆದು ಉದರ ಸಂಬಂಧಿ ರೋಗಗಳಿಗೆ ಮುಕ್ತಿ ಸಿಗುತ್ತದೆ.
•ಮಣ್ಣಿನ ಪಟ್ಟಿಯನ್ನು 20 ನಿಮಿಷ ಕಣ್ಣುಗಳ ಮೇಲೆ ಇಡುವುದರಿಂದ ಸರಿಯಾಗಿ ರಕ್ತ ಸಂಚಾರ ಆಗುವುದರೊಂದಿಗೆ ಕಣ್ಣಿನ ಸುಸ್ತು, ಅಲರ್ಜಿ ಕಡಿಮೆಯಾಗಿ ಕಣ್ಣು ತಂಪಾಗುತ್ತದೆ.
•ಮಂಡಿ ನೋವು, ಸಂಧಿವಾತಗಳಿಗೆ ಮಣ್ಣಿನ ಲೇಪ ಮಾಡುವುದರಿಂದ ಮೂಳೆಗಳು ಸಡಿಲಗೊಂಡು ನೋವು ನಿವಾರಣೆಯಾಗುತ್ತದೆ.
•ಮಣ್ಣು ದೇಹಕ್ಕೆ ಚೈತನ್ಯ ತುಂಬುವುದರಿಂದ ಮಣ್ಣಿನ ಸ್ನಾನ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಚಿಕಿತ್ಸೆಯಲ್ಲಿ ಮಲಗಿಕೊಂಡು ಅಥವಾ ಕುಳಿತ ಭಂಗಿಯಲ್ಲಿ ಇಡೀ ದೇಹಕ್ಕೆ ಮಣ್ಣು ಹಚ್ಚಿ 45 ರಿಂದ-60 ನಿಮಿಷ ಸೂರ್ಯನ ಬೆಳಕಿನಡಿ ದೇಹವನ್ನು ಒಡ್ಡಬೇಕು.ಹೀಗೆ ಮಾಡುವುದರಿಂದ ದೇಹದಲ್ಲಿನ ವಿಷ ವಸ್ತುಗಳು ವಿಸರ್ಜಿಸಲುಪಟ್ಟು, ಒತ್ತಡ ನಿವಾರಣೆ ಆಗುವುದರೊಂದಿಗೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ಡಾ. ಶ್ರೀಲತಾ ಪದ್ಯಾಣ
ಪ್ರಕೃತಿ ಚಿಕಿತ್ಸಾ ತಜ್ಞರು
Begur-Bommanahalli
Bangalore-560008
Mob.no-9739257948