ಆರ್ಥಿಕ ಮುಗ್ಗಟ್ಟಿನಿಂದ ತಬಲ ಕಲಾವಿದ ಹಾಗೂ ಅವರ ಪತ್ನಿ ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್
ಮಂಗಳೂರು,ಜೂ 09 : ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಜೂ.9ರ ಬುಧವಾರ ಪಿಂಟೋಸ್ ಲೇನ್ ಬಳಿ ವರದಿಯಾಗಿದೆ . ಮೃತರನ್ನು ತಬಲ ಕಲಾವಿದ, 52 ವರ್ಷದ ಸುರೇಶ್ ಹಾಗೂ ಅವರ ಪತ್ನಿ ವಾಣಿ ಎಂದು ಗುರುತಿಸಲಾಗಿದೆ. ವಾಣಿ ಖಾಸಗಿ ಕಾಲೇಜೊಂದರಲ್ಲಿ ಕರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಸುರೇಶ್ ಅವರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರೆ, ಅವರ ಪತ್ನಿ ವಾಣಿ ಮನೆಯೊಳಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ದಂಪತಿಗಳು ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಮೃತರು ಓರ್ವ ಮಗನನ್ನು ಅಗಲಿದ್ದಾರೆ. ಸ್ಥಳಕ್ಕೆ ಕದ್ರಿ ಪೋಲಿಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.