Recent Posts

Sunday, January 19, 2025
ದಕ್ಷಿಣ ಕನ್ನಡರಾಜ್ಯಸುದ್ದಿ

ಶಾಸಕ ಡಾ.ಭರತ್ ಶೆಟ್ಟಿ ಪ್ರಯತ್ನದಿಂದಾಗಿ AOMSI ನಿಂದ UK ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧ ಮಂಗಳೂರಿಗೆ – ಕಹಳೆ ನ್ಯೂಸ್

ಮಂಗಳೂರು: ಶಾಸಕ ಡಾ.ಭರತ್ ಶೆಟ್ಟಿ ಪ್ರಯತ್ನದಿಂದಾಗಿ ಎಓಎಂಎಸ್‍ಐ ನಿಂದ ಯುಕೆ ಉತ್ಪಾದಿತ ಬ್ಲ್ಯಾಕ್ ಫಂಗಸ್ ಔಷಧವನ್ನು ಮಂಗಳೂರಿಗೆ ತರಿಸಲಾಗಿದೆ.

ಮಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧದ ಕೊರತೆ ಇರುವುದನ್ನು ಮನಗಂಡ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಮಾಡಿದ ವಿಶೇಷ ಪ್ರಯತ್ನದ ಫಲವಾಗಿAssociation of Oral and Maxillofacial Surgeons of India (AOMSI) ಸಂಘಟನೆಯ ಮಾಜಿ ಅಧ್ಯಕ್ಷರಾದ ಡಾ.ಕೃಷ್ಣಮೂರ್ತಿ ಬೊನತಾಯ ಹಾಗೂ ಡಾ.ಬದ್ರಿ ಅವರು ಯುನೈಟೆಡ್ ಕಿಂಗಡಂನಿಂದ ಬ್ಲ್ಯಾಕ್ ಫಂಗಸ್ ಗೆ ಬೇಕಾಗಿರುವ Amphotericin ಔಷಧವನ್ನು ಭಾರತಕ್ಕೆ ತರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ AOMSI ಅಧ್ಯಕ್ಷರಾದ ಡಾ.ಮಂಜುನಾಥ ರೈ ಹಾಗೂ ಮಾಜಿ ಅಧ್ಯಕ್ಷರಾದ ಡಾ.ಮುಸ್ತಫಾ ಖಾದರ್ ಉಪಸ್ಥಿತರಿದ್ದರು.

ಡಾ.ವೈ ಭರತ್ ಶೆಟ್ಟಿಯವರು ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ನಿರಂತರ ಸಂವಹನ ನಡೆಸಿದ ಪ್ರಯತ್ನ ಆಡಳಿತಾತ್ಮಕ ಕಾರ್ಯಗಳು ಸುಗಮವಾಗಿ ನಡೆದು ಔಷಧ ಮಂಗಳೂರಿಗೆ ಬರಲು ಸಹಕಾರಿಯಾಯಿತು. ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ AOMSI ಸಂಘಟನೆ ಮುಂಚೂಣಿಯಲ್ಲಿದ್ದು, ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿಯೂ ಸರ್ಕಾರದೊಂದಿಗೆ ಕೈಜೋಡಿಸಿದೆ.