ಮಂಗಳೂರಿನಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ; ಆರೋಪಿ ಜಿಹಾದಿ ಅಬ್ದುಲ್ ರಫೂರ್ ವಿರುದ್ಧ ಎಫ್.ಐ.ಆರ್..! – ಕಹಳೆ ನ್ಯೂಸ್
ಮಂಗಳೂರು: ಜೂ 10 : ಅಪ್ರಾಪ್ತ ಬಾಲಕಿಗೆ ಮೊಬೈಲ್ ಗಿಫ್ಟ್ ನೀಡಿ ಆ ಮೂಲಕಆತ್ಮೀಯತೆ ಬೆಳೆದು ಬಳಿಕ ಆಕೆಯ ಮನೆಗೆ ತೆರಳಿ ನಿರಂತರ ಅತ್ಯಾಚಾರ ನಡೆಸಿರುವ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಕಟ್ಟೆಯ ಅಬ್ದುಲ್ ರವೂರ್ ಎಂಬಾತ ಆರೋಪಿ.
ಸುಮಾರು 9 ತಿಂಗಳಿನಿಂದ ಆರೋಪಿಯೂ ಅಪ್ರಾಪ್ತಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಬಾಲಕಿಗೆ ಜೂನ್ 9ರಂದು ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಪಾಸಣೆಗೆ ವೈದ್ಯರಲ್ಲಿಗೆ ಕರೆದೊಯ್ದಾಗ ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ. ಈ ಬಳಿಕ ಬಾಲಕಿಯಲ್ಲಿ ವಿಚಾರಣೆ
ನಡೆಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯೂ ಅಪ್ರಾಪ್ತಿಗೆ ಒಂದೂವರೆ ವರ್ಷದ ಹಿಂದೆ ಮೊಬೈಲ್ ಫೋನ್ ಖರೀದಿಸಿ ಕೊಟ್ಟಿದ್ದ ಬಳಿಕ ಆಕೆಯ ಜೊತೆ ಫೋನ್ನಲ್ಲಿ ಮಾತಾಡುವುದು ಮತ್ತು ಸಂದೇಶ ಕಳುಹಿಸುತ್ತಿದ್ದ. ಆಕೆಯ ಜತೆ ಆರೋಪಿಗೆ ಆತ್ಮೀಯತೆ ಬೆಳೆದ ಬಳಿಕ ಈತ ಬಾಲಕಿಯ ಮನೆಗೆ ರಾತ್ರಿ ವೇಳೆ ಆರಂಭಿಸಿದ್ದಾನೆ ಎಂದು
ತಿಳಿದು ಬಂದಿದೆ 2020ರ ಅಕ್ಟೋಬರ್ ಮೊದಲ ವಾರದಿಂದ ಬಾಲಕಿಯ ಮನೆಗೆ ಆರೋಪಿಯೂ ರಾತ್ರಿ ಬರಲು ಆರಂಭಿಸಿದ್ದಾನೆ. ಎಂದು ಆರೋಪಿಸಲಾಗಿದೆ.
ಪ್ರತಿದಿನ ರಾತ್ರಿ 1 ಗಂಟೆಗಯ ಸುಮಾರಿಗೆ ಬಾಲಕಿಯ ಮನೆಯ ಕಾಂಪೌಂಡ್ ಗೋಡೆಯನ್ನು ಹಾರಿ ಬರುತ್ತಿದ್ದ ಎನ್ನಲಾಗುತ್ತಿದೆ. ಬಳಿಕ ಈತ ಬಾಲ್ಕನಿಯ ಬಾಗಿಲನ್ನು ತೆಗೆಯುವಂತೆ ಬಾಲಕಿಯನ್ನು ಒತ್ತಾಯಿಸುತ್ತಿದ್ದ. ಬಾಲ್ಕನಿಯ ಒಳಬಂದು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ದ ಪ್ರಕರಣ ದಾಖಲಾಗಿದೆ