ಕಡಬದ ಮುಜೂರುನಲ್ಲಿ ಸಹೋದರನಿಗೆ ಲಾಂಗ್ ನಿಂದ ಹಲ್ಲೆ, ಕೊಲೆಯತ್ನ ಪ್ರಕರಣ ; ಆರೋಪಿಗೆ ನಿರೀಕ್ಷಣಾ ಜಾಮೀನು – ಕಹಳೆ ನ್ಯೂಸ್
ಪುತ್ತೂರು: ಮುಜೂರು ಸಹೋದರನಿಗೆ ಲಾಂಗ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯೆನ್ನಲಾಗಿದ್ದ ಪ್ರೀತಂ ರವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಫಿರೇರಾರವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ಐತ್ತೂರು ಗ್ರಾಮದ ಮುಜೂರು ಎಂಬಲ್ಲಿನ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರರಾದ ಧ್ರುವ ಹಾಗೂ ಪ್ರೀತಂ ಎಂಬವರ ಮಧ್ಯೆ ಜಾಗದ ವಿಚಾರಕ್ಕೆ ಸಂಬAಧಿಸಿ ಮನಸ್ತಾಪ ಇತ್ತು ಎನ್ನಲಾಗಿದ್ದು, ಮೇ ೧೪ರ ರಾತ್ರಿ ಪ್ರೀತಂ ರವರು ಧ್ರುವ ಅವರಿಗೆ ಲಾಂಗ್‌ನಿ0ದ ಕಡಿದು ಲಾಂಗನ್ನು ಅಲ್ಲೇ ಬಿಸಾಡಿ,ಇನ್ನು ಮುಂದಕ್ಕೆ ನೀನು,” “ನಾನು ಮದ್ಯ ಸೇವಿಸಿ ಗಲಾಟೆ ಮಾಡುತ್ತಿರುವುದಾಗಿ ಅಪಪ್ರಚಾರ ಮಾಡಿದರೆ,ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಜೀವಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದು, ನಂತರ ತೀವ್ರ ಸ್ವರೂಪದ ಗಾಯಗೊಂಡಿರುವ ಧ್ರುವ ಅವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ತದನಂತರ, ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು, ಎಂಬ ಪ್ರಕರಣಕ್ಕೆ ಸಂಬ0ಧಿಸಿದ0ತೆ ದಿನಾಂಕ ೧೪/೦೫/೨೦೨೧ ರಂದು ಧ್ರುವ ಎಂಬವರು ಪ್ರೀತಂರವರ ವಿರುದ್ಧ ಕಡಬ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು. ಅದರಂತೆ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೪೪೭,೫೦೪,೩೨೬,೫೦೬ರನ್ವಯ ಪ್ರಕರಣವನ್ನು ದಾಖಲಿಸಿದ್ದರು.
ಹೀಗಿರುವಾಗ, ಆರೋಪಿ ಪ್ರೀತಂ ರವರು ತನ್ನ ಪರ ವಕೀಲರಾದ ಶ್ರೀ.ಮಹೇಶ್ ಕಜೆಯವರು ಮುಖಾಂತರ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.÷ಈ ಘಟನೆಯು ನಡೆದಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ. ಆರೋಪಿಯು ಹಲ್ಲೆ, ಕೊಲೆಗೆ ಯತ್ನಿಸಿದ್ದಾರೆ ಎಂಬುವುದಕ್ಕೆ ಸಂಬoಧಿಸಿದoತೆ ಯಾವುದೇ ಪೂರಕವಾದ ಸಾಕ್ಷಾ÷್ಯಧಾರಗಳು ಲಭ್ಯವಿರುವುದಿಲ್ಲ, ಎಂಬಿತ್ಯಾದಿ ಅಂಶಗಳ್ನು÷ವಾದಿಸಿದ್ದರು. ಸರಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು.ವಾದ-ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಶರತ್ತುಬದ್ಧ ನಿರೀಕ್ಷಣಾ ಜಾಮೀನುನನ್ನು ಮಂಜೂರು ಮಾಡಿದೆ.