Recent Posts

Monday, January 20, 2025
ಸುದ್ದಿ

ಮಂಗಳಮುಖಿಯರು ನಮ್ಮಂತೆ ಮನುಷ್ಯರು:- ✍️ಧನುಷ್ ಕೊರಂಬಡ್ಕ – ಕಹಳೆ‌ ನ್ಯೂಸ್

“ಒಂದು ಸುಂದರವಾದ ಹೃದಯವು ಸಾವಿರ ಸುಂದರ ಮುಖಕ್ಕಿಂತ ಉತ್ತಮವಾಗಿದೆ. ಆದ್ದರಿಂದ ಮುಖಗಳಿಗಿಂತ ಸುಂದರವಾದ ಹೃದಯ ಹೊಂದಿರುವ ಜನರನ್ನು ಆಯ್ಕೆ ಮಾಡಿ” ಇದು ಮಾತ್ರ ನಿಜವಾದ ಮಾತು ಸ್ನೇಹಿತರೇ ನಮ್ಮ ಜೀವನದಲ್ಲಿ ಎಷ್ಟೋ ಘಟನೆಗಳು ನಮಗೆ ಅನುಭಾವವಾಗಿರಬಹುದು. ನಾವು ನೋಡುವ ನೋಟ ಸರಿಯಾಗಿದ್ದಾರೆ ಎಲ್ಲಾವು ಸರಿಯಾಗಿದ್ದಂತೆ ನಾವು ಕೆಲವಷ್ಟು ಜನರನ್ನು ಬೇರೆ ರೀತಿಯಲ್ಲಿ ನೋಡುತ್ತೆವೇ ಅದರೆ ಅವರಿಗೂ ಒಂದು ಹೃದಯವಿದೆ ಅ ಹೃದಯಕ್ಕೂ ನೋವುವಾಗುತ್ತದೆ ಎಂಬುದನ್ನು ಮರೆತು ಬಿಟ್ಟಿರುವುದು ಒಂದು ದುರಂತ ಸಂಗತಿಯು ಹೌದು. ಇಂತಹ ಉತ್ತಮ ಸಮಾಜದಲ್ಲಿ ಕಷ್ಟದ ಬದುಕನ್ನು ಸಾಗಿಸುತ್ತಿರುವ ಎಷ್ಟೋ ಜನರಲ್ಲಿ ಮಂಗಳಮುಖಿಯರು ಕೂಡ ಒಬ್ಬರು.. ಬಹುತೇಕರಿಗೆ ಮಂಗಳಮುಖಿಯರೆಂದರೆ ಅಸಡ್ಡೆ, ಕೆಲವರಿಗೆ ಅಸಹ್ಯ, ಮತ್ತೆ ಕೆಲವರಿಗೆ ಭಯ, ಕುಟುಂಬದವರಿಗೆ ಅವಮಾನ. ಅವರು ಹತ್ತಿರ ಬಂದರೆ ಮೈಕೈ ಮುಟ್ಟುತ್ತಾರೆಂದು ಅಸಹ್ಯ ಪಟ್ಟುಕೊಳ್ಳುವವರು ಹಲವರಾದರೆ, ಬೇಡಲು ಬರುತ್ತಾರೆಂಬುದು ಕೆಲವಷ್ಟು ಜನರ ಮನಸ್ಸಿನಲ್ಲಿ ತುಂಬಿಕೊಂಡಿರುತ್ತದೆ.

ಮಂಗಳಮುಖಿಯರು ಅಂದರೆ ಮೂಗು ಮುರಿಯುವವರೇ ಹೆಚ್ಚು. ಟ್ರಾಫಿಕ್ ಸಿಗ್ನಲ್‍ಗಳಲ್ಲಿ, ಟೋಲ್‍ಗಳಲ್ಲಿ, ಬಸ್ಸುಗಳಲ್ಲಿ, ಅಂಗಡಿಗಳಲ್ಲಿ, ಮದುವೆ – ನಾಮಕರಣ ಸಮಾರಂಭಗಳಿಗೆ ಬಂದು ಹಣ ಕೇಳುತ್ತಾ, ಮಾಂಸದ ಅಡ್ಡೆಗಳಲ್ಲಿ ಕೆಲಸ ಮಾಡುತ್ತಾ ಸಮಾಜದ ಮೂಲೆಗೆ ತಳ್ಳಲ್ಪಟ್ಟಿದ್ದರು. ತಮ್ಮ ಜೀವನ ನಡೆಸಲು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎನ್ನುವ ಅಸೆ ಅವರಲ್ಲಿ ಇದರು ಕೂಡ ಯಾರು ಕೆಲಸವನ್ನು ಕೊಡುವುದಿಲ್ಲ, ತನ್ನ ಜೀವನ ಸಾಗಿಸುವುದಕ್ಕಾಗಿ ಬೇರೆ ದಾರಿ ಕಾಣದೆ ಇಂತಹ ಕಾರ್ಯವನ್ನು ಮಾಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳಮುಖಿಯರು ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ನೋವುಗಳ ಗುರುತು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಎಲ್ಲರಿಗೂ ಕಾಣಿಸುವುದು ಅವರು ಧರಿಸುವ ಸೀರೆ, ರವಿಕೆ, ತುಟಿಗೆ ತಿದ್ದಿಕೊಳ್ಳುವ ಲಿಪ್‍ಸ್ಟಿಕ್ ಮಾತ್ರ. ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ . ಆದರೆ ಅವರ ಮನದಾಳದ ನೋವು ಮಾತ್ರ ಯಾರಿಗೂ ಅರ್ಥವಾಗದು. ನಾವು ಕೂಡ ಇದರ ಬಗ್ಗೆ ಯೋಜನೆ ಮಾಡಬೇಕು ಅಲ್ಲವೇ ಅವರು ಕೂಡ ನಮ್ಮಂತೆ ಮನುಷ್ಯರೇ ಅವರಿಗೂ ಅಸೆ ಅಕಾಂಶೆ ಇರುತ್ತದೆ ನಾವು ಅವರನ್ನು ಬೇರೆ ರೀತಿಯಿಂದ ಕಂಡಾಗ ಅವರಿಗೂ ನೋವುವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಒಂದು ಹೊತ್ತಿನ ಊಟಕ್ಕೆ ಈ ಕಾರ್ಯವನ್ನು ಮಾಡುತ್ತಾರೆ ನಾವು ಅವರಿಗೆ ಕೆಲಸ ನೀಡಿದ್ದಾಗ ಅವರು ಬೇರೆ ಬೇರೆ ಪ್ರದೇಶದಲ್ಲಿ ಹಣವನ್ನು ಕೇಳುತ್ತಾರ? ಪ್ರಸುತ್ತ ನಮ್ಮ ದೇಶ ಕರೋನಾ ಎಂಬ ದೊಡ್ಡ ರೋಗದಿಂದ ಎಷ್ಟೋ ಬಡ ಜನರು ಅಹಾರಕ್ಕೆ ಪರದಾಡುವಂತಾಗಿದೆ.ಹೀಗಿರುವಾಗ ಮಂಗಳಮುಖಿಯರ ಪರಿಸ್ಥಿತಿ ಏನು. ನಾವು ಇದರ ಬಗ್ಗೆ ಯೋಜನೆ ಮಾಡಬೇಕು ಸ್ನೇಹಿತರೇ ನಾವು ಯಾವತ್ತಿಗೂ ಯಾರನ್ನು ಕೂಡ ಕೀಳಾಗಿ ನೋಡಬಾರದು.

ಮಂಗಳಮುಖಿಯರನ್ನು ನಾವು ನೋಡಯವಂತಹ ನೋಟವನ್ನು ಬದಲಾಯಿಸಬೇಕು. ಅವರ ಮನಸಿನಲ್ಲಿಬಡತನ, ನಿರುದ್ಯೋಗ, ಸಮಾಜದ ಮೂದಲಿಕೆಗಳು, ಹಿಂಸೆ, ಯಾತನೆ, ಅದರ ನಡುವೆಯೇ ಇವರ ಜೀವನ. ಈ ಜೀವನ ಬೇಕೇ? ಎನ್ನುವ ಪ್ರಶ್ನೆಯೊಂದಿಗೇ ಬದುಕಬೇಕಾದ
ಅನಿವಾರ್ಯತೆ ಮಂಗಳಮುಖಿಯರದು.ಹೀಗಿರುವಾಗ ನಾವು ಅವರನ್ನು ಬೇರೆ ತರ ನೋಡುವುದು ಒಂದು ರೀತಿಯಲ್ಲಿ ದೊಡ್ಡ ತಪ್ಪು ಸ್ನೇಹಿತರೇ

✍️ ಧನುಷ್ ಕೊರಂಬಡ್ಕ