Sunday, January 19, 2025
ಸಿನಿಮಾ

ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ – ಕಹಳೆ ನ್ಯೂಸ್

ಇಂದೋರ್: ಯುವಕರಿಬ್ಬರು ಬೈಕಿನಲ್ಲಿ ಬಂದು ಮಾಡೆಲ್‍ನ ಸ್ಕರ್ಟ್ ಎಳೆದು ಇದರ ಕೆಳಗೆ ಏನಿದೆ ತೋರಿಸು ಎಂದು ಅಸಭ್ಯವಾಗಿ ವರ್ತಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ತನ್ನ ಜೊತೆ ಆದ ಈ ಘಟನೆ ಬಗ್ಗೆ ರೂಪದರ್ಶಿ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಯುವಕರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಒಬ್ಬರು ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ನೀನು ಸ್ಕರ್ಟ್ ಹಾಕಿದೀಯಾ. ಹಾಗಾಗಿ ಅವರು ನಿನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ರೂಪದರ್ಶಿ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರೂಪದರ್ಶಿ ತನ್ನ ಕಾಲಿಗೆ ಗಾಯವಾಗಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ನಂತರ, “ನಾನು ಸ್ಕೂಟಿಯಲ್ಲಿ ಹೊರಗಡೆ ಹೋಗುತ್ತಿದ್ದೆ. ಆಗ ಯುವಕರಿಬ್ಬರು ಬೈಕನ್ನು ನಡುರಸ್ತೆಯಲ್ಲಿ ನಿಲ್ಲಿಸಿ ನನ್ನ ಸ್ಕರ್ಟ್ ಎಳೆಯುತ್ತಿದ್ದರು. ಅಷ್ಟೇ ಅಲ್ಲದೇ ಸ್ಕರ್ಟ್ ಕೆಳಗೆ ಏನಿದೆ ತೋರಿಸು ಎಂದು ಹೇಳುತ್ತಿದ್ದರು. ನಾನು ಅವರಿಂದ ತಪ್ಪಿಸಿಕೊಳ್ಳುವಾಗ ಸ್ಕೂಟಿ ಹಿಡಿದುಕೊಂಡು ಕೆಳಗೆ ಬಿದ್ದೆ” ಎಂದು ರೂಪದರ್ಶಿ ಟ್ವೀಟ್ ಮಾಡಿದ್ದಾರೆ.

ಈ ಘಟನೆ ಇಂದೋರ್ ನ ಜನಸಂದಣಿ ರಸ್ತೆಯಲ್ಲಿ ನಡೆದಿದ್ದು, ಈ ವೇಳೆ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಜನಸಂದಣಿಯಿರುವ ರಸ್ತೆಯಲ್ಲಿ ಕಾಮುಕರು ನನ್ನ ಸ್ಕರ್ಟ್ ಎಳೆದಾಡಿದ್ದಾರೆ. ಇನ್ನೂ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ಇವರು ನನ್ನ ಜೊತೆ ಹೇಗೆ ವರ್ತಿಸಬಹುದು ಎಂದು ರೂಪದರ್ಶಿ ಮತ್ತೊಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ನನಗೆ ಸಾಕಷ್ಟು ಗಾಯವಾಗಿರುವುದರಿಂದ ನನ್ನ ಸ್ನೇಹಿತರು ಹತ್ತಿರದ ರೆಸ್ಟೋರೆಂಟ್‍ಗೆ ಕರೆದುಕೊಂಡು ಹೋದರು. ಆಗ ಅಲ್ಲಿ ನಾವೆಲ್ಲ ಕುಳಿತ್ತಿದ್ದಾಗ ಒಬ್ಬರು ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ನೀನು ಸ್ಕರ್ಟ್ ಹಾಕಿದ್ದಕ್ಕೆ ನಿನ್ನ ಜೊತೆ ಈ ರೀತಿ ಆಯ್ತು ಎಂದು ಹೇಳಿದ್ದರು ಎಂದು ರೂಪದರ್ಶಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.