Recent Posts

Monday, January 20, 2025
ಸುದ್ದಿ

ಸುಳ್ಯ.ಅಡ್ಕಾರು ಮಾವಿನಕಟ್ಟೆ ಬಳಿ ಪಿಕಪ್ ವಾಹನ ಮತ್ತು ಕಂಟೈನರ್ ಡಿಕ್ಕಿ, ಐವರು ಗಂಭೀರ- ಕಹಳೆ ನ್ಯೂಸ್

ಸುಳ್ಯ ಜಾಲ್ಸೂರು ಸಮೀಪದ ಅಡ್ಕಾರು ಮಾವಿನಕಟ್ಟೆ ಬಳಿ ನಿರಂತರ ವಾಹನ ಅಪಘಾತಗಳು ಸಂಭವಿಸುತ್ತಿದ್ದು ಹಲವಾರು ಜೀವಗಳು ಬಲಿಯಾದ ಘಟನೆಗಳು ನಡೆಯುತ್ತಿದೆ.


ಇದೀಗ ಲಾಕ್ಡೌನ್ ಗೊಂಡು ವಾಹನ ದಟ್ಟನೆ ಕಡಿಮೆ ಇದ್ದರೂ ಇಂದು ಸಂಜೆ ಮತ್ತೊಮ್ಮೆ ಅದೇ ಪ್ರದೇಶದಲ್ಲಿ ಪಿಕಪ್ ಮತ್ತು ಕಂಟೇನರ್ ಗಳ ಮಧ್ಯೆ ಡಿಕ್ಕಿ ಸಂಭವಿಸಿ ಐವರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತ ವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಳ್ಯ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿರುತ್ತಾರೆ. ಇದೇ ಬ್ಯಾರಿಕೇಡ್ ನ ಸಮೀಪ ಇಂದು ಎರಡು ವಾಹನಗಳ ಅಪಘಾತ ಸಂಭವಿಸಿ ಅಪಘಾತಕ್ಕೆ ವಾಹನ ಸವಾರರ ಅತಿ ವೇಗವೇ ಕಾರಣ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಯಗೊಂಡವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಕೆವಿಜಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.