Recent Posts

Monday, January 20, 2025
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ:-  ಬಡ ಕುಟುಂಬದ ಸದಸ್ಯರಿಗೆ ಧನ ಸಹಾಯ ವಿತರಣೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಅಯ್ಯಪ್ಪ ದೀಪೋತ್ಸವ  ಸಮಿತಿ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಪೂರ್ವಾಧ್ಯಕ್ಷರಾದ ರೋ.ಉಮೇಶ್ ಕೆ ಎನ್ ಇವರ ಸಾರಥ್ಯದಲ್ಲಿ ಬೆಳಂದೂರು ಕಾರ್ಲಾಡಿ ಅವರ ಮನೆಯ ಆಸುಪಾಸಿನಲ್ಲಿರುವ ೫ ಬಡವರ್ಗದ ಕುಟುಂಬಗಳಿಗೆ ನಿತ್ಯೋಪಯೋಗಿ  ಆಹಾರದ ಕಿಟ್ಟನ್ನು ನೀಡಿರುತ್ತಾರೆ. ಅಲ್ಲದೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬವೊAದಕ್ಕೆ  ರೂ.೩,೦೦೦ ಹಾಗೂ ಗೃಹ ನಿರ್ಮಾಣದ ಪ್ರಯುಕ್ತ ಇನ್ನೊಂದು ಬಡ ಕುಟುಂಬದ ಸದಸ್ಯರಿಗೆ ರೂ.೧೦,೦೦೦ ಧನ ಸಹಾಯವನ್ನು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ನಿಯೋಜಿತ ಅದ್ಯಕ್ಷ ವಿಜಯ್ ಕುಮಾರ್ ಅಮ್ಯೆ, ಪೂರ್ವ ಅಧ್ಯಕ್ಷರಾದ ಲೋಕೇಶ್. ಬಿ. ಎನ್,  ಭರತ್ ನೆಕ್ರಾಜೆ, ಹಾಗೂ ಜಯಶ್ರೀಉಮೇಶ್  ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು