ಸುಬ್ರಹ್ಮಣ್ಯದಲ್ಲಿ ಅನಾಥವಾಗಿರುವ ಮಹಿಳೆಯೊಬ್ಬರ ಗುರುತು ಪತ್ತೆಗೆ ಸಹಕರಿಸುವರೇ ಎಂದು ಸಾರ್ವಜನಿಕರಲ್ಲಿ ಠಾಣಾಧಿಕಾರಿ ಮನವಿ-ಕಹಳೆ ನ್ಯೂಸ್
ಸುಬ್ರಹ್ಮಣ್ಯ :ಸುಬ್ರಹ್ಮಣ್ಯದಲ್ಲಿ ಅನಾಥವಾಗಿರುವ ಮಹಿಳೆಯೊಬ್ಬರ ಗುರುತು ಪತ್ತೆ ಆಗಬೇಕಿದೆ. ಸಹಕರಿಸುವರೇ ಎಂದು ಸಾರ್ವಜನಿಕರಲ್ಲಿ ಠಾಣಾಧಿಕಾರಿ ಒಮಾನಾ ಅವರು ಮನವಿ ಮಾಡಿದ್ದಾರೆ.
ಸುಮಾರು ಒಂದು ತಿಂಗಳಿಂದ ವಿಶ್ವ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಗಳಲ್ಲಿ ಅನಾಥ ಮಹಿಳೆಯೊಬ್ಬರು ಸುತ್ತಾಡುವುದು, ಕಂಡುಬರುತ್ತಿದೆ.
ಅವರ ಬಗ್ಗೆ ಗುರುತು ಪತ್ತೆಗೆ ಸಹಕರಿಸುವಂತೆ ಸುಬ್ರಹ್ಮಣ್ಯ ಠಾಣಾಧಿಕಾರಿ ಸಬ್ ಇನ್ಸ್ಪೆಕ್ಟರ್ ಓಮನ ಅವರು ಮನವಿ ಮಾಡಿದ್ದಾರೆ.
ಸಾಧಾರಣ ನಲ್ವತ್ತು ವರ್ಷ ಪ್ರಾಯದ ಮಹಿಳೆಯೊಬ್ಬರು ಸುಬ್ರಹ್ಮಣ್ಯ ಪರಿಸರದಲ್ಲಿದ್ದು, ಅವರಿಗೆ ವಾಸ್ತವ್ಯಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಅವರು ಮಾತನಾಡುತ್ತಾರೆ ಅವರಲ್ಲಿ ವಿಚಾರಿಸಿದಾಗ ಯಾವುದೇ ನೆನಪಿಲ್ಲ ಹೇಳುತ್ತಾರೆ. ಊರು ಗೊತ್ತಿಲ್ಲ, ತಂದೆ, ತಾಯಿ ಗೊತ್ತಿಲ್ಲ ಹೇಳುತ್ತಾರೆ.
ದಿನನಿತ್ಯ ದೇವಸ್ಥಾನದಿಂದ ಕುಮಾರಧಾರ ವರೆಗೆ ನಡೆಯುತ್ತಾರೆ.
ಅವರ ಬಳಿಯಲ್ಲಿ ಯಾವುದೇ ಧಾಖಲೆ ಪತ್ರಗಳು ಇಲ್ಲದೆ ಇರುವ ಕಾರಣ ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.ಮಹಿಳೆಯ ಯಾರಾದರೂ ಸಂಬಂಧಿಕರಿದ್ದರೆ ಸುಬ್ರಹ್ಮಣ್ಯ ಠಾಣಾಧಿಕಾರಿ ಅವರನ್ನು ಸಂಪರ್ಕಿಸಬಹುದು. ಅಲ್ಲದೇ ಮಹಿಳೆಯ ಮಾನಸಿಕ ಸುಧಾರಣೆ ದೃಷ್ಟಿಯಿಂದ ಯಾವುದಾದರೂ ಆಶ್ರಮಕ್ಕೆ ಸೇರಿಸುವ ಬಗ್ಗೆ ಯೋಚಿಸಿದ್ದು, ಈ ಬಗ್ಗೆ ಸೇವಾ ಮನೋಭಾವ ಉಳ್ಳವರು ಸಂಪರ್ಕಿಸಲು ಕೋರಲಾಗಿದೆ.
ಸಂಪರ್ಕ ಸಂಖ್ಯೆ : 9480805366