Tuesday, January 21, 2025
ಬಂಟ್ವಾಳ

ಪುಂಜಾಲಕಟ್ಟೆ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೋವಿಡ್-೧೯ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಆರೋಗ್ಯ ಸಿಬಂದಿಗಳಿಗೆ ಸನ್ಮಾನ ಹಾಗೂ ಸುರಕ್ಷತಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೋವಿಡ್-೧೯ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಆರೋಗ್ಯ ಸಿಬಂದಿಗಳಿಗೆ ವಿಶೇಷ ಸನ್ಮಾನ ಹಾಗೂ ಸುರಕ್ಷತಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಗುರುವಾರ ಪ್ರಾ.ಆ.ಕೇಂದ್ರದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ ಅವರು ಸಮ್ಮಾನಿಸಿ ಪ್ರಾ.ಆ.ಕೇಂದ್ರದ ವೈದ್ಯಾಽಕಾರಿ ಡಾ| ಸತೀಶ್ ಎಂ. ಸಿ. ಅವರು ಮಾತನಾಡಿ, ಆಯುಷ್ ವೈದ್ಯಾಽಕಾರಿ ಡಾ| ಸೋಹನ್ ಕುಮಾರ್, ಪ್ರಾ. ಆ.ಕೇಂದ್ರದ ವೈದ್ಯರ ಸಹಿತ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕಿಯರು, ವಾಹನ ಚಾಲಕರು, ಪ್ರಯೋಗಾಲಯ ಸಿಬಂದಿ, ಇತರ ವಿಭಾಗದ ಒಟ್ಟು ೨೦ ಮಂದಿ ಕೊರೋನಾ ವಾರಿಯರ್ಸ್ ರನ್ನು ನಗದು ಸಹಿತ ಸಮ್ಮಾನಿಸಲಾಯಿತು. ಇದೇ ವೇಳೆ ಮಾಸ್ಕ್, ಸ್ಯಾನಿಟೈಸರ್‌ನ್ನು ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಿಲಾತಬೆಟ್ಟು ಗ್ರಾ. ಪಂ ಅಧ್ಯಕ್ಷೆ, ಸಂಘದ ನಿರ್ದೇಶಕಿ ಹರ್ಷಿಣಿ ಪುಷ್ಪಾನಂದ, ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ, ನಿರ್ದೇಶಕರಾದ ಬೂಬ ಸಪಲ್ಯ, ಸುಂದರ ನಾಯ್ಕ, ಸೀತಾರಾಮ ಶೆಟ್ಟಿ ಸೇವಾ, ಸಂತೋಷ್ ಕುಮಾರ್ ಶೆಟ್ಟಿ, ನಾರಾಯಣ ಪೂಜಾರಿ, ಚಂದ್ರಶೇಖರ ಹೆಗ್ಡೆ, ದಿನೇಶ್ ಮೂಲ್ಯ, ಶಿವಯ್ಯ, ಸಿಬಂದಿಗಳಾದ ಬಬಿತಾ, ದೀಕ್ಷಿತ್ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು