Recent Posts

Sunday, January 19, 2025
ಕ್ರೈಮ್

ಬೆಳ್ಳಂಬೆಳಗ್ಗೆ ಎಣ್ಣೆ ಪಾರ್ಟಿ, ನಂತರ ರೌಡಿ ಶೀಟರ್ ಶ್ರೀಕಾಂತ್ ನ ಬರ್ಬರ ಕೊಲೆ–ಕಹಳೆ ನ್ಯೂಸ್

ಕಲಬುರಗಿ: ಬೆಳ್ಳಂಬೆಳಗ್ಗೆಯೇ ಕೂಡಿಕೊಂಡು ಎಣ್ಣೆ ಪಾರ್ಟಿ ಮಾಡಿದವರೇ ರೌಡಿ ಶೀಟರ್ ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ನಗರದಲ್ಲಿ ನಡೆದಿದೆ.

ಶ್ರೀಕಾಂತ್ ( 28) ಎಂಬುವವನೇ ಕೊಲೆಯಾದ ರೌಡಿ ಶೀಟರ್. ಇಲ್ಲಿನ ನಗರದ ರಾಮ ನಗರದ ನಿವಾಸಿಯಾಗಿದ್ದು, ಬಡಾವಣೆಯ ಹಿಂದಿನ ಖಾಲಿ ಜಾಗದಲ್ಲೇ ಹತ್ಯೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಕೊಲೆ ನಡೆದಿದ್ದು, ಇದಕ್ಕೂ ‌ಮುನ್ನ ಶ್ರೀಕಾಂತ್ ಮತ್ತು ಕೊಲೆಗಾರರು ಒಟ್ಟಿಗೆ ಕೂಡಿಕೊಂಡು ಎಣ್ಣೆ ಪಾರ್ಟಿ ಮಾಡಿದ್ದರು. ಶ್ರೀಕಾಂತನಿಗೆ ಮದ್ಯ ಕುಡಿಸಿ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸಂಜು ಗುತ್ತೇದಾರ, ಅಂಬರೀಶ್ ಗುತ್ತೇದಾರ ಎಂಬುವವರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು, ರೌಡಿ ಶೀಟರ್ ಶ್ರೀಕಾಂತ್ ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆರು ತಿಂಗಳ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.