ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ಇದರ ವತಿಯಿಂದ ವೆನ್ಲಾಕ್ ಅಸ್ಪತ್ರೆ ಸಹಯೋಗದಲ್ಲಿ ಮರ್ದಾಳದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ-ಕಹಳೆ ನ್ಯೂಸ್
ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ಇದರ ವತಿಯಿಂದ ವೆನ್ಲಾಕ್ ಅಸ್ಪತ್ರೆ ಸಹಯೋಗದಲ್ಲಿ ಮರ್ದಾಳದಲ್ಲಿ ರಕ್ತದಾನ ಶಿಬಿರ ನಡೆಯಿತು.
ಈ ಕಾರ್ಯಕ್ರಮವನ್ನು ಮರ್ದಾಳ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀ ಹರೀಶ್ ಕೊಡಂದೂರು ನೇರವೇರಿಸಿದರು.
ಮುಖ್ಯ ಅತಿಥಿಯಾಗಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹಕಾರ್ಯದರ್ಶಿಯವರಾದ ನವಿನ್ ನೆರಿಯ ಭಾಗವಹಿಸಿ “ಕೋವಿಡ್ ನಂತ ಸಂಕಷ್ಟಕಾಲದಲ್ಲೂ ಹಿಂದೂ ಸಂಘಟನೆಯ ಮಾತೃ ಹೃದಯದ ಕಾರ್ಯಕರ್ತರು ನಿಸ್ವಾರ್ಥ ಭಾವನೆಯಿಂದ ರಕ್ತದಾನದಂತ ಅಭಿನಂದನಾರ್ಹ ಕಾರ್ಯ ಮಾಡುತಿದ್ದಾರೆ ಎಂದರು.
ವೆನ್ಲಾಕ್ ಅಸ್ಪತ್ರೆಯ ಬ್ಲಡ್ ಬ್ಯಾಂಕ್ ಪ್ರಭಾರ ವೈದಯರಾಗಿರುವ ಡಾ. ಆ್ಯಂಟನಿ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ವಿಶ್ವಹಿಂದೂ ಪರಿಷದ್ ಪ್ರಖಂಡ ಅದ್ಯಕ್ಷರಾದ ರಾಧಕೃಷ್ಣ ಕೋಲ್ಪೆ ಅದ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸೇವಾಭಾರತಿಯ ಮಾಧವ ಕೊಲ್ಪೆ, ವೆನ್ಲಾಕ್ ಅಸ್ಪತ್ರೆಯ ವೈದ್ಯದಿಕಾರಿ ಡಾ.ಅಧಿತಿ ಉಪಸ್ಥಿತರಿದ್ದರು.
ಬಜರಂಗದಳ ಪ್ರಖಂಡ ಸಂಯೋಜಕ ಮೂಲಚಂದ್ರ ಕಾಂಚನ ಸ್ವಾಗತಿಸಿದರು. ಬಜರಂಗದಳ ಮರ್ದಾಳ ಘಟಕದ ಸಂಯೋಜಕರಾದ ದೇವಿಪ್ರಸಾದ್ ಧನ್ಯವಾದ ನೀಡಿದರು. ಚೇತನ್ ಅಂತಿಬೆಟ್ಟು ಕರ್ಯಕ್ರಮ ನಿರೂಪಿಸಿದರು.
ಈ ಸಂದರ್ಬದಲ್ಲಿ ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿ ಪ್ರಮೊದ್ ನಂದುಗುರಿ, ಸೇವಾಭಾದತಿ ಪ್ರಮುಖರಾದ ಅಜಿತ್ ಅರ್ತಿಲ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೃಷ್ಣಯ್ಯ ಶೆಟ್ಟಿ ಕಡಬ.ಜಯರಾಮ್ ಪಡೆಜ್ಜಾರು,ಉಮೇಶ್ ಮರ್ದಾಳ,ಚಂದ್ರಶೇಖರ್ ಮರ್ದಾಳ,ಮಾತೃ ಮಂಡಳಿ ಪ್ರಮುಖರಾದ ಗೀತಾಕ್ಕ ಮುಂತಾದ ಹಲವಾರು ಪ್ರಮುಖರು ಉಪಸ್ಥಿತರಿದ್ದರು.ಶಿಬಿರದಲ್ಲಿ ಒಟ್ಟು 82 ಮಂದಿ ರಕ್ತದಾನ ಮಾಡಿದರು