Sunday, January 19, 2025
ರಾಜಕೀಯ

ಕರಾವಳಿಗೆ ಬರಲಿದ್ದಾರೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ – ಕಹಳೆ ನ್ಯೂಸ್

ಮಂಗಳೂರು: ಕಾಂಗ್ರೆಸ್ ಪಾಲಿನ ಸ್ಟಾರ್ ಪ್ರಚಾರಕಿ, ಇಂದಿರಾ ಗಾಂಧಿಯ ಪಡಿಯಚ್ಚು ಅಂತಲೇ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಗಾಂಧಿ ಕರಾವಳಿಗೆ ಪ್ರ್ರಚಾರಕ್ಕೆ ಬರುವುದು ಖಚಿತವಾಗಿದೆ.

ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾರನ್ನು ಅಂತಿಮ ಹಂತದಲ್ಲಿ ಪ್ರಚಾರ ಕಣಕ್ಕಿಳಿಸುವುದು ಖಚಿತವಾಗಿದ್ದು, ಇದೇ ವೇಳೆ ಕರಾವಳಿ ಭಾಗಕ್ಕೂ ಭೇಟಿ ನೀಡಲಿದ್ದಾರೆ. ಮೇ 1ರಿಂದ ಪ್ರಧಾನಿ ನರೇಂದ್ರ ಮೋದಿಯೂ ಪ್ರಚಾರಕ್ಕೆ ಬರಲಿದ್ದು ಈಗಾಗಲೇ ಪ್ರವಾಸ ದಿನಾಂಕ ನಿಗದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಕೊನೆ ಕ್ಷಣದಲ್ಲಿ ಪ್ರಧಾನಿ ಮೋದಿಯನ್ನು ಪ್ರಚಾರ ಕಣಕ್ಕಿಳಿಸುವ ಮಾದರಿಯಲ್ಲೇ ಕಾಂಗ್ರೆಸ್, ಗಾಂಧಿ ಕುಡಿ ಪ್ರಿಯಾಂಕಾರನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಖಚಿತಪಡಿಸಿದರೂ, ಪ್ರವಾಸ ದಿನಾಂಕ ಮಾತ್ರ ಅಂತಿಮಗೊಂಡಿಲ್ಲ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡು ಸುತ್ತಿನ ಪ್ರಚಾರ ನಡೆಸಿದ್ದಾರೆ. ಇದೇ ಏಪ್ರಿಲ್ 27ರಂದು ಮತ್ತೆ ದಕ್ಷಿಣ ಕನ್ನಡಕ್ಕೆ ಬರಲಿದ್ದು, ಬಂಟ್ವಾಳ ಕ್ಷೇತ್ರದಲ್ಲಿ ಪ್ರಚಾರ ಜಾಥಾ ನಡೆಸಲಿದ್ದಾರೆ. ಆದರೆ, ರಾಹುಲ್ ಗಿಂತಲೂ ಪ್ರಿಯಾಂಕಾ ವಾದ್ರಾ ವರ್ಚಸ್ವಿ ನಾಯಕಿಯಾಗಿದ್ದರಿಂದ ಕರಾವಳಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ನಿರೀಕ್ಷೆಯಲ್ಲಿದ್ದಾರೆ.