Tuesday, January 21, 2025
ಪುತ್ತೂರು

ಟರ್ಪಾಲು ಗುಡಿಸಲಿನಲ್ಲಿ ವಾಸವಾಗಿದ್ದ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಡುವುದಾಗಿ ಪುತ್ತೂರು ನಗರ ಸಭೆ ಅಧ್ಯಕ್ಷರಿಂದ ಭರವಸೆ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ನಗರದ ಬಪ್ಪಳಿಗೆಯ ಸಿಂಗಾಣಿಯ ಜನತಾ ಕಲೋನಿಯಲ್ಲಿ ಟರ್ಪಾಲು ಗುಡಿಸಲಿನಲ್ಲಿ ಬಡ ಕುಟುಂಬವೊAದು ವಾಸಿಸುತ್ತಿದ್ದು ಇದರ ಬಗ್ಗೆ ಮಾಹಿತಿ ಬಂದ ಕೂಡಲೇ ಪುತ್ತೂರು ನಗರಸಭಾ ಅಧ್ಯಕ್ಷರು ಜೀವಂಧರ್ ಜೈನ್, ಪುಡಾ ಅಧ್ಯಕ್ಷರು ಭಾಮಿ ಅಶೋಕ್ ಶೆಣೈ, ಬಜರಂಗದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್,ವಿನಾಯಕ ಫ್ರೆಂಡ್ಸ್ ಬಲ್ನಾಡು ಇದರ ಅಧ್ಯಕ್ಷ ಶರತ್ ಮುದಲಾಜೆ ಹಾಗೂ ಪ್ರಮುಖರಾದ ಭರತ್ ಚನಿಲ ಇವರು ಭೇಟಿ ನೀಡಿದರು ಹಾಗೂ ಪುತ್ತೂರು ನಗರ ಸಭಾ ಅಧ್ಯಕ್ಷರಾದ ಜೀವಂಧರ್ ಜೈನ್ ಇವರು ತುರ್ತಾಗಿ ತಾತ್ಕಾಲಿಕ ಮನೆ ನಿರ್ಮಾಣ ಹಾಗೂ ಮುಂದಿನ ದಿನಗಳಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು