Tuesday, January 21, 2025
ಸುದ್ದಿ

ಭಾರೀ ಮಳೆಗೆ ಮರವೂರು ಸೇತುವೆಯಲ್ಲಿ ಬಿರುಕು, ಮಂಗಳೂರು ಮತ್ತು ವಿಮಾನ ನಿಲ್ದಾಣ ಸಂಚಾರ ಸ್ಥಗಿತ ; ಘಟನಾ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್

ಮಂಗಳೂರು : ವಿಪರೀತ ಮಳೆಯಿಂದಾಗಿ, ನೀರಿನ ಹರಿವು ಹೆಚ್ಚಾದ ಕಾರಣ ಮರವೂರು ಸೇತುವೆ ಕುಸಿತಕ್ಕೊಳಗಾಗಿದ್ದು, ಮಾಹಿತಿ ತಿಳಿದ ತಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ‌, ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್, ಡಾ. ವೈ ಭರತ್ ಶೆಟ್ಟಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಬದಲಿ ರಸ್ತೆ ಕಾಲ ಕೂಳೂರು, ಕೆ ಬಿ ಎಸ್ ಜೋಕಟ್ಟೆ, ಪೋರ್ಕೊಡಿ,ಬಜಪೆ. ಅಥವಾ ಪಚ್ಚನಾಡಿ, ವಾಮಂಜೂರ್, ಗುರುಪುರ ಕೈಕಂಬ, ಬಜಪೆ ಮಾರ್ಗವಾಗಿ ತೆರಳಬಹುದಾಗಿದೆ ಎಂದು ಸಂಸದರು ತಿಳಿಸಿದರು. ಮತ್ತು ಸಮಸ್ಯೆ ಸರಿಪಡಿಸುವಲ್ಲಿ ಸರಕಾರ ತಕ್ಷಣ ಸ್ಪಂದನೆ ನೀಡಲಿದ್ದು, ಆದಷ್ಟು ಬೇಗ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬರವಸೆ ನೀಡಿದ್ದಾರೆ.