Wednesday, April 2, 2025
ದಕ್ಷಿಣ ಕನ್ನಡಸುದ್ದಿಸುಳ್ಯ

ಡೆಂಗ್ಯೂ ಜ್ವರಕ್ಕೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ 27 ವರ್ಷದ ಯುವಕ ಬಲಿ – ಕಹಳೆ ನ್ಯೂಸ್

ಸುಳ್ಯ, ಜೂ 16: ಡೆಂಗ್ಯೂ ಜ್ವರಕ್ಕೆ 27 ವರ್ಷದ ಯುವಕನೋರ್ವ ಬಲಿಯಾದ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದಲ್ಲಿ ನಡೆದಿದೆ. ಇದು ಸುಳ್ಯ ತಾಲೂಕಿನಲ್ಲಿ ಎರಡನೇ ಪ್ರಕರಣವಾಗಿದೆ.

ದೇವಚಳ್ಳ ಗ್ರಾಮದ ದೇವ ಕನ್ನಡಕಜೆ ಚಿನ್ನಪ್ಪ ಹಾಗೂ ಪ್ರೇಮ ದಂಪತಿಗಳ ಏಕೈಕ ರ ಪುತ್ರ ಶಶಿಕುಮಾರ್ (27) ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 5 ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಗೆ ತೆರಳಿದ್ದರು. ಅಲ್ಲಿ ಜ್ವರ ಉಲ್ಬಣಿಸಿ ಸೋಮವಾರ ನಿಧನರಾದರೆಂದು ತಿಳಿದುಬಂದಿದೆ. ಇವರು ಸುಬ್ರಹ್ಮಣ್ಯದಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಮಾಹಾಮಾರಿಯ ನಡುವೆ ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಜ್ವರ ಹೆಚ್ಚುತ್ತಿದ್ದು ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಗಮನಹರಿಸಬೇಕಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ