ಕೇಂದ್ರ ಸರ್ಕಾರದ ಪರವಾಗಿ ಹೈಕೋರ್ಟ್ ಗೆ ರಾಜಶೇಖರ ಹಿಲಿಯಾರು, ಪ್ರಿಯಾಂಕ ಶ್ಯಾಮ್ ಭಟ್, ಸಂಪಾಜೆ ಸೇರಿದಂತೆ ದಕ್ಷಿಣ ಕನ್ನಡ ಮೂಲದ 6 ಮಂದಿ ವಕೀಲರ ನೇಮಕ – ಕಹಳೆ ನ್ಯೂಸ್
ಬೆಂಗಳೂರು : ಕೇಂದ್ರ ಸರ್ಕಾರದ ಪರವಾಗಿ ರಾಜ್ಯ ಹೈಕೋರ್ಟ್ ಗೆ ಹಿರಿಯ ವಕೀಲರು ಹಾಗೂ ವಕೀಲರನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ 118 ವಕೀಲರ ಪೈಕಿ 2 ಮಂದಿ ದಕ್ಷಿಣ ಕನ್ನಡದವರು ಹಾಗೂ 16 ಮಂದಿ ಹಿರಿಯ ವಕೀಲರ ಪೈಕಿ 4 ಮಂದಿ ದಕ್ಷಿಣ ಕನ್ನಡ ಮೂಲಕದವರು.
ಹೈಕೋರ್ಟಿನ ಪ್ರಸಿದ್ಧ ನ್ಯಾಯವಾದಿ ಎಸ್. ರಾಜಶೇಕರ್, ರಾಜೇಶ್ ರೈ., ಕೆ. ಅಪರಾಜಿತ ಅರಿಗ, ಪಿ. ಕರುಣಾಕರ ಅವರನ್ನು 2015ರಲ್ಲಿ ಕೇಂದ್ರ ಸರಕಾರದ ಪರವಾಗಿ ರಾಜ್ಯ ಹೈಕೋರ್ಟ್ ಗೆ ಹಿರಿಯ ವಕೀಲರಾಗಿ ನೇಮಕ ಮಾಡಲಾಗಿತ್ತು. ಇದೀಗ ಅವರನ್ನು ಮತ್ತೆ ಮರುನೇಮಕ ಮಾಡಿ ಆದೇಶ ಹೊರಡಿಸಿದೆ. ಕೆ. ರಾಜಾರಾಮ ಸೂರ್ಯಂಬೈಲು, ಪ್ರಿಯಾಂಕ ಎಸ್.ಭಟ್ ಅವನ್ನು ಕೇಂದ್ರ ಸರ್ಕಾರದ ಪರ ವಕೀಲರನ್ನಾಗಿ ನೇಮಕಮಾಡಲಾಗಿದೆ.
ಎಸ್. ರಾಜಶೇಖರ್ ಮೂಲತಃ ಬೆಳ್ತಂಗಡಿ ತಾಲೂಕಿನ ಇಳಂತಿಲದ ಮೊಗ್ರು ಹಿಲಿಯಾರು ನಿವಾಸಿ, ಕಂಬಳ ಹೋರಾಟದ ಪರವಾಗಿಯೂ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದರು. ಇವರು ಹಿಲಿಯಾರು ದಿ. ವೆಂಕಟ್ರಮಣ ಭಟ್ ಹಾಗೂ ತಾಯಿ ಸರೋಜಾ ವಿ.ಭಟ್ ಅವರ ಪುತ್ರ. ಪತ್ನಿ ಪ್ರಸಿದ್ಧ ಸಂಗೀತ ಕುಟುಂಬ ಕಾಂಚನಾ ಸುಬ್ವರತ್ನಂ ಅವರ ಸುಪುತ್ರಿ ಶ್ರುತಿ ಭಟ್, ಬೆಂಗಳೂರಿನಲ್ಲಿ ಕಳೆದ ಹತ್ತಾರು ವರ್ಷಗಳಿಂದ ವಕೀಲರಾಗಿ ಸೇವೆಸಲ್ಲಿಸುತ್ತಿದ್ದು, ಪುತ್ತೂರು ವಿವೇಕಾನಂದ ಕಾಲೇಜಿನ ಹಳೆವಿದ್ಯಾರ್ಥಿ.
ರಾಜೇಶ್ ರೈ. ಕೆ. ಅವರು ಮೂಲತಃ ಕೇಪು ಕಲ್ಲಂಗಳ ನಿವಾಸಿ, ಇಡಿಗೆ ಐಎಂಎ ವಂಚನೆ ಪ್ರಕರಣದ ವಿಶೇಷ ಅಭಿಯೋಜಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಹೈಕೋರ್ಟ್ ನ ಸರಕಾರಿ ಪ್ಲೀಡರ್ ಆಗಿಯೂ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.
ರಾಜಾರಾಮ್ ಸೂರ್ಯಂಬೈಲು ಅವರು ಪಾಣಾಜೆಯ ಸೂರ್ಯಂಬೈಲು ನಿವಾಸಿ. ಬೆಂಗಳೂರು ಆಹಾರ ನಿಗಮದ ವಕೀಲರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರಿಯಾಂಕ ಶ್ಯಾಮ್ ಭಟ್ ಅವರು ಮೂಲತಃ ಸಂಪಾಜೆಯವರು. ತಂದೆ ನಿವೃತ್ತಿ ಐ.ಎ.ಎಸ್. ಅಧಿಕಾರಿ, ಯಕ್ಷಗಾನ ಕಲಾಪೋಷಕರಾದ ಟಿ.ಶ್ಯಾಮ್ ಭಟ್. ದೆಹಲಿಯ ಸುಪ್ರೀಂ ಕೋರ್ಟಿನಲ್ಲೂ ಪ್ರಿಯಾಂಕ ಎಸ್.ಭಟ್ ಅವರು ವಕೀಲೆಯಾಗಿ ಕರ್ತವ್ಯ ನಿಭಾಯಿಸುತ್ತಿರುವುದು ಗಮನಾರ್ಹ ವಿಷಯ.
ಅಪರಾಜಿತ ಅರಿಗ, ಪುತ್ತೂರಿನ ಕೊಂಬೆಟ್ಟು ನಿವಾಸಿಯಾಗಿದ್ದಾರೆ. ಪಿ. ಕರುಣಾಕರ ಅವರು ಬೆಳ್ತಂಗಡಿ ಕೊಯ್ಯೂರು ನಿವಾಸಿಯಾಗಿದ್ದಾರೆ.