Friday, September 20, 2024
ಸುದ್ದಿ

ಪುತ್ತೂರಿನಲ್ಲಿ ಭಾರಿ ಅನಾಹುತ ; ಗುಡ್ಡೆ ಕುಸಿತ – ಮಣ್ಣಿನಡಿಯಲ್ಲಿ ಸಿಲುಕಿದ 8 ಕಾರ್ಮಿಕರು – ಭರದಿಂದ ಸಾಗಿದ ರಕ್ಷಣಾ ಕಾರ್ಯ – ಕಹಳೆ ನ್ಯೂಸ್

ಪುತ್ತೂರು : ಎ 24:ಇಲ್ಲಿನ KSRTC ಬಸ್ ನಿಲ್ದಾಣದ ಸಮೀಪ  ಅನಿತಾ ಆಯಿಲ್ ಮಿಲ್ ಬಳಿ ಮಣ್ಣು ಕುಸಿದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ 8 ಜನ ಕಾರ್ಮಿಕರು ಮಣ್ಣಿನಡಿಯಲ್ಲಿ ಹೂತು ಹೋಗಿದ್ದಾರೆ. ಪುತ್ತೂರು ಪೋಲಿಸ್ ಇಲಾಖೆ ಮತ್ತು ಅಗ್ನಿ ಶಾಮಕ ದಳ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

ಅನಿತಾ ಆಯಿಲ್ ಮಿಲ್ ನವರ ಜಾಗದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಅಲ್ಲಿ ಇಂದು ಬೆಳಿಗ್ಗೆ ೧೦.30ರ ಸುಮಾರಿಗೆ ಇದ್ದಕಿದ್ದಂತೆ ಮಣ್ಣು  ಕುಸಿದು ಬಿದ್ದಿದೆ. ಕೆಲಸ ಮಾಡುವ ಅಷ್ಟು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಪೊಲೀಸರು ಹಾಗೂ ಸ್ಥಳಿಯರು ಮಣ್ಣಿನಡಿಯಿಂದ ಆ ಕಾರ್ಮಿಕರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಈಗಾಗಲೇ ಮೂವರನ್ನು ರಕ್ಷಿಸಿದ್ದು ,ತುರ್ತು ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಫತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಬೀರವಾಗಿದೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕಿ ಶಕುಂತಲ ಟಿ ಶೆಟ್ಟಿ , ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿ ,ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ,ನಗರ ಸಭೆ ಸದಸ್ಯ ಶಕ್ತಿ ಸಿನ್ಹಾ ಮುಂತಾದವರು ಭೇಟಿ ನೀಡಿದರು.

ಜಾಹೀರಾತು