ಮಂಗಳೂರು : ಪುತ್ತೂರು, ಸುಳ್ಯ ಹಾಗೂ ಹಾಸನದಲ್ಲಿ ಚಿನ್ನಾಭರಣ ಮಾರಾಟದ ಮಳಿಗೆಗಳನು ಹೊಂದಿರುವ ಪ್ರತಿಷ್ಟಿತ ಜಿ.ಎಲ್.ಆಚಾರ್ಯ ಜ್ಯು ವೆಲ್ಲರ್ಸ್’ನ ಸ್ಥಾಪಕರಾದ ದಿ.ಜಿ ಎಲ್ ಆಚಾರ್ಯ ರವರ ಪತ್ನಿ ಲೀಲಾವತಿ ಆಚಾರ್ಯರವರು ಜೂ 18 ರಂದು ಮಧ್ಯಾಹ್ನ ಮೈಸೂರಿನಲ್ಲಿ ನಿಧನರಾದರು. ಇವರು ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಾಲಕ ಬಲರಾಮ ಆಚಾರ್ಯರ ತಾಯಿ ಲೀಲಾವತಿ ಆಚಾರ್ಯ.
ಲೀಲಾವತಿ ಆಚಾರ್ಯರವರು ಮೈಸೂರಿನಲ್ಲಿ ತನ್ನ ಪುತ್ರಿಯ ಮನೆಯಲ್ಲಿದ ಸಂದರ್ಭ ಮೃತ ಪಟ್ಟಿದ್ದಾರೆ . ಅವರ ಅಂತ್ಯ ಸಂಸ್ಕಾರವೂ ಇಂದು ( ಜೂ 18 ರಂದು ) ಮೈಸೂರಿನಲ್ಲಿಯೇ ನಡೆಯಲಿದೆ.
ಮೃತರು ಪುತ್ರ ಬಲರಾಮ ಆಚಾರ್ಯ, ಪುತ್ರಿ ಜ್ಯೋತಿ ಗೋಪಾಲಕೃಷ್ಣನ್ , ಅಳಿಯ , ಸೊಸೆ ಮೊಮ್ಮಕ್ಕಳು ಮರಿಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.