Saturday, November 23, 2024
ದಕ್ಷಿಣ ಕನ್ನಡಸಂತಾಪಸುದ್ದಿ

ನಿಯಂತ್ರಣ ತಪ್ಪಿ ನವಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ ; ಓರ್ವ ಸಾವು – ಕಹಳೆ ನ್ಯೂಸ್

ಮಂಗಳೂರು, ಜೂ 21 : ನವಮಂಗಳೂರು ಬಂದರಿನ 14ನೇ ಬರ್ತ್‌ನಲ್ಲಿ 10 ಚಕ್ರದ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ ಮತ್ತೋರ್ವ ಕಾಣೆಯಾದ ಘಟನೆ ಭಾನುವಾರ ರಾತ್ರಿ 10.30 ಕ್ಕೆ ನಡೆದಿದೆ.

ಮೃತರನ್ನು ಕಂಟೈನರ್ ಲಾರಿ ಚಾಲಕ ಉತ್ತರ ಕರ್ನಾಟಕ ಮೂಲದ ರಾಜೇಸಾಬ (26) ಎಂದು ಗುರುತಿಸಲಾಗಿದ್ದು, ಲಾರಿ ಕ್ಲೀನರ್ ಭೀಮಪ್ಪ(22) ನಾಪತ್ತೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡೆಲ್ಟಾ ಕಂಪನಿಯ ಕೆಎ 22 ಸಿ 8257 ನೋಂದಣಿಯ ಟ್ರಕ್ , ಕಬ್ಬಿಣದ ಅದಿರನ್ನು ಹಡಗಿನಿಂದ ಲೋಡ್ ಮಾಡಲು ಬಂದಿದ್ದ ಈ ವೇಳೆ ಘಟನೆ ನಡೆದಿದೆ. ಇದನ್ನು ಕಂಡು ಅಲ್ಲಿಂದ ಹಾದು ಹೋಗುವ ಟಗ್ ಬೋಟ್ ನ ಪೈಲಟ್ ಘಟನೆ ಬಗ್ಗೆ ವಿಟಿಎಂಎಸ್ ಕ ಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣ ಸಿಐಎಸ್ಎಫ್ ಕ್ಯೂಆರ್ ಟಿ ಮತ್ತು ಸಿಸ್ಎಫ್ ಗಸ್ತು ದೋಣಿ ಅಲ್ಲಿಗೆ ತಲುಪಿ ಟಗ್ ಬೋಟ್ ಸಹಾಯದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ . ಸುಮಾರು 11.30 ರ ವೇಳೆಗೆ ಸಮುದ್ರಕ್ಕೆ ಬಿದ್ದ ಓರ್ವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ರವಾನಿಸಿದರೂ ಅದಾಗಲೇ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ .

ಕಾಣೆಯಾದ ಲಾರಿ ಕ್ಲೀನರ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.