Recent Posts

Sunday, January 19, 2025
ಬೆಂಗಳೂರುರಾಜ್ಯಸಿನಿಮಾಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 8 ಸೆಕೆಂಡ್ ಇನ್ನಿಂಗ್ಸ್ ; ಬುಧವಾರದಿಂದ ಮತ್ತೆ ಆರಂಭ, ಜೂ.23ಕ್ಕೆ ಮಹಾಸಂಚಿಕೆ.! – ಕಹಳೆ ನ್ಯೂಸ್

ಬೆಂಗಳೂರು, ಜೂ.21 : ಕನ್ನಡ ಬಿಗ್‍ಬಾಸ್ ಸೀಸನ್ 8 ಕೊರೊನಾ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದು, ಇದೀಗ ಮತ್ತೆ ಅದೇ ಸ್ಪರ್ಧಿಗಳೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಗೊಳ್ಳಲಿದೆ.

ಬಿಗ್‍ಬಾಸ್ ಸೀಸನ್ 8ನ 2ನೇ ಇನ್ನಿಂಗ್ಸ್ ಆಡೋದಕ್ಕೆ 12 ಮಂದಿ ಸ್ಪರ್ಧಿಗಳು ಸ್ಪರ್ಧಿಗಳು ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತಿದ್ದು,ಇದೇ ಬುಧವಾರ(ಜೂ.23)ರಂದು ಸಂಜೆ 6ಕ್ಕೆ ಬಿಗ್‍ಬಾಸ್ ಸೆಕೆಂಡ್ ಇನಿಂಗ್ಸ್ ಮೊದಲ ದಿನದ ಮಹಾಸಂಚಿಕೆ ಪ್ರಾರಂಭವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಅರ್ಧದಲ್ಲಿಯೇ ಬಿಗ್‍ಬಾಸ್ ಸೀಸನ್ 8 ನಿಂತು ಹೋಗಿದ್ದು, ಇದೀಗ ಸ್ಪರ್ಧಿಗಳು ಹೊಸ ಗೇಮ್ ಪ್ಲ್ಯಾನ್‍ನೊಂದಿಗೆ ಗ್ರ್ಯಾಂಡ್ ಆಗಿ ಮನೆಯನ್ನು ಪ್ರವೇಶ ಮಾಡಲಿದ್ದಾರೆ.

ಸ್ಪರ್ಧಿಗಳಾದ ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್, ಅರವಿಂದ್ ಕೆ.ಪಿ, ರಘು ಗೌಡ, ಶಮಂತ್ ಈಗಾಗಲೇ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೋಟೆಲ್‌‌ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿದು ಬಂದಿದೆ.