Recent Posts

Sunday, January 19, 2025
ಸುದ್ದಿ

2020-21 ನೇ ಸಾಲಿನ ರಾಜ್ಯಮಟ್ಟದ ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಪರೀಕ್ಷೆಯಲ್ಲಿ ರಾಜ್ಯ ಪುರಸ್ಕಾರ ಪಡೆದ ಪ್ರಣಮ್ಯ ಡಿ ಹಾಗೂ ಸೃಷ್ಟಿ .ಕೆ – ಕಹಳೆ ನ್ಯೂಸ್

ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಸುಬ್ರಹ್ಮಣ್ಯ ಡಿ ಅರಸಿನಮಕ್ಕಿ ಇವರ ಪುತ್ರಿಯಾದ ಪ್ರಣಮ್ಯ ಡಿ, ಹಾಗೂ ಶ್ರೀಮತಿ ಸುಮಿತ್ರ ಹಾಗೂ ಜಯ ಕುಮಾರ್ ಶಾರದಾ ನೆಲ್ಯಾಡಿ ಇವರ ಪುತ್ರಿಯಾದ ಸೃಷ್ಟಿ .ಕೆ 2020-21 ನೇ ಸಾಲಿನ ರಾಜ್ಯಮಟ್ಟದ ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಪರೀಕ್ಷೆಯಲ್ಲಿ ರಾಜ್ಯ ಪುರಸ್ಕಾರ ಪಡೆದಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಣಮ್ಯ ಡಿ ಹಾಗೂ ಸೃಷ್ಟಿ .ಕೆ ಶ್ರೀಮತಿ ರೇμÁ್ಮ .ಯು ಇವರ ಮಾರ್ಗದರ್ಶನದಲ್ಲಿ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರಸ್ತುತ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಣಮ್ಯ ಡಿ ಅವರು, ವಿದ್ವಾನ್ ಬಿ ದೀಪಕ್ ಕುಮಾರ್, ವಿದುಷಿ ಶ್ರೀಮತಿ ಪ್ರೀತಿಕಲಾ ಹಾಗೂ ವಿದ್ವಾನ್ ಗಿರೀಶ್ ಕುಮಾರ್ ಇವರಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಸಂಗೀತ ಶಿಕ್ಷಣವನ್ನು ಶ್ರೀಮತಿ ಪದ್ಮಾವತಿ ರವರಿಂದ ಕಲಿಯುತ್ತಿದ್ದಾರೆ.

ಪ್ರಣಮ್ಯ ಡಿ ಹಾಗೂ ಸೃಷ್ಟಿ .ಕೆ ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿಯಲ್ಲಿ ಅಕ್ಷಯ್ ಎಚ್ ಪುತ್ತೂರು ಕಿರಣ್ ಮುರಲಿ ಪುತ್ತೂರು ಸುಮಂತ್ ಆಚಾರ್ಯ ಪುಂಜಾಲಕಟ್ಟೆ ಇವರಲ್ಲಿ ಕಥಕ್ ಹಾಗೂ ವೆಸ್ಟರ್ನ್ ನೃತ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ.