Recent Posts

Monday, April 14, 2025
ದಕ್ಷಿಣ ಕನ್ನಡಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ಅಖಿಲ ಭಾರತ ಹಿಂದೂ ಯುವ ಮಹಿಳಾ ಮೋರ್ಛಾದ ಕರ್ನಾಟಕ ಪ್ರದೇಶ್ ಅಧ್ಯಕ್ಷೆಯಾಗಿ ದಿಶಾ ಸಿ ಶೆಟ್ಟಿ – ಕಹಳೆ ನ್ಯೂಸ್

ಬೆಂಗಳೂರು : ಅಖಿಲ ಭಾರತ ಹಿಂದೂ ಯುವ ಮಹಿಳಾ ಮೋರ್ಛಾದ ಕರ್ನಾಟಕ ಪ್ರದೇಶ್ ಅಧ್ಯಕ್ಷೆಯಾಗಿ ಮಂಗಳೂರಿನ ಸುರತ್ಕಲ್ ಮೂಲದ ಕು.ದಿಶಾ ಸಿ ಶೆಟ್ಟಿಯವರನ್ನು ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಮಹಿಳಾ ಮೋರ್ಛಾದ ಅಧ್ಯಕ್ಷೆ ಜಯ ಮಂಜರಿಯವರು ಆದೇಶ ಹೊರಡಿಸಿದ್ದು, ದಿಶಾ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕು. ದಿಶಾ ಸಿ. ಶೆಟ್ಟಿಯವರು ಪ್ರಸಿದ್ಧ ಯಕ್ಷಗಾನ ಕಲಾವಿದೆಯಾಗಿದ್ದು, ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದಾರೆ. ಸಣ್ಣ ವಯಸ್ಸಿನಿಂದಲೇ ಹಿಂದುತ್ವದ ಬಗ್ಗೆ ಒಲವು ಹೊಂದಿದ ದಿಶಾ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿವಾರ ಸಂಘಟನೆಗಳ ಕಾರ್ಯದಲ್ಲಿ ಪಾಲು ಪಡೆಯುತ್ತಿದ್ದರಲ್ಲದೆ, ಆನೇಕ ಕಾರ್ಯಕ್ರಮಗಳನ್ನು ಹಿಂದೂ ಧರ್ಮ ಹಾಗೂ ಸಮಾಜ ಸೇವೆಯ ಮೂಲಕ ಮಾಡುತ್ತಿದ್ದರು. ಇದು ರಾಜ್ಯ ಮಟ್ಟದ ಜವಾಬ್ದಾರಿಯಾಗಿದ್ದು, ವಿಶೇಷ ಗೌರವ ಪಡೆದಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ