Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುವಾಣಿಜ್ಯಸುದ್ದಿಸುಳ್ಯ

ಇಂದಿನಿಂದ ” ತಿರುಮಲ ಹೋಂಡಾ”ದ ಎಲ್ಲಾ ಶೋರೂಂಗಳು ಓಪನ್ ; ಎಲ್ಲಾ ಸಿಬ್ಬಂದಿಗಳಿಗೂ ವ್ಯಾಕ್ಸಿನೇಷನ್‌, ಕೋವಿಡ್ ಟೆಸ್ಟ್..! – ಸಂಪೂರ್ಣ ಸುರಕ್ಷಿತೆಯೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಿದೆ ಪರಿಸರದ ನಂ.1 ಗ್ರಾಹಕರ ಸ್ನೇಹಿ ಸಂಸ್ಥೆ – ಕಹಳೆ ನ್ಯೂಸ್

ಪುತ್ತೂರು: ಕೊರೋನಾ ಸಂಕಷ್ಟದಿಂದ ನಲುಗುತ್ತಿದ್ದ ಉದ್ಯಮ ಕ್ಷೇತ್ರಗಳು‌ ಇಂದಿನಿಂದ ಚೇತರಿಕೆ ಕಂಡಿದ್ದು, ಕರಾವಳಿಯಲ್ಲಿ ಇಂದಿನಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಸೀಮಿತ ಅವಧಿಯಲ್ಲಿ ತೆರೆದಿದ್ದು, ವ್ಯಾಪರ ವೈವಾಟುಗಳಿಗೆ ಅನುಮತಿಯನ್ನು ಜಿಲ್ಲಾಡಳಿತ ನೀಡಿದೆ.

ಜಿಲ್ಲೆಯ ನಂ.೧ ದ್ವಿಚಕ್ರ ವಾಹನಗಳ ಶೋರೂಂ ತಿರುಮಲ ಹೋಂಡಾ ಸಂಸ್ಥೆ ಇಂದಿನಿಂದ ಕಾರ್ಯಾಚರಣೆಯನ್ನು, ತನ್ನ ಎಲ್ಲಾ ಗ್ರಾಹಕರಿಗೆ ಸೇವೆಯನ್ನು ನೀಡಲಿದ್ದು, ಸಂಪೂರ್ಣ ಕೋವಿಡ್ ನಿಯಮಾವಳಿಗಳ ಪಾಲನೆಯನ್ನು ಮಾಡಿಕೊಂಡು ಸನ್ನಧವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಾ ಸಿಬ್ಬಂದಿಗಳು ವ್ಯಾಕ್ಸಿನೇಷನ್‌ :

ತಿರುಮಲ ಹೊಂಡಾ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೂ ವ್ಯಾಕ್ಸಿನೇಷನ್‌ ಈಗಾಗಲೇ ನೀಡಿದ್ದು, ಪ್ರಯಾಶಃ ಇಂತಹದೊಂದ್ದು, ಹೆಚ್ಚೆಯನ್ನು ತನ್ನ ಕಾರ್ಮಿಕರ ಹಿತ ದೃಷ್ಟಿಯಿಂದ ಹಾಗೂ ಗ್ರಾಹಕರ ಹಿತ ದೃಷ್ಟಿಯಿಂದ ಮಾಡಿದ್ದು, ಅಭಿನಂದನಾರ್ಹವಾದ ಸಂಗತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್..! ಎಲ್ಲಾ ವರದಿಗಳು ನೆಗೆಟಿವ್..!

ತಾಲೂಕು ಆಡಳಿತ ಜಿಲ್ಲಾಡಳಿತ ನಿರ್ದೇಶನದಂತೆ ಕೋವಿಡ್ ಟೆಸ್ಟ್ ಮಾಡಿದ್ದು, ತಿರುಮಲದ ಎಲ್ಲಾ ಸಿಬ್ಬಂದಿಗಳಿಗೂ ಕೋವಿಡ್ ನೆಗೆಟಿವ್ ಬಂದಿದ್ದು, ತಿರುಮಲ ಹೋಂಡಾ ಸಂಪೂರ್ಣ ಸುರಕ್ಷತೆಯೊಂದಿಗೆ ಗ್ರಾಹಕರ ಸೇವೆಗೆ ತೆರೆದುಕೊಂಡಿದೆ.

ಎನ್.ಟಿ. ತಿರುಮಲೇಶ್ವರ ಭಟ್ ಅವರ ಸಮರ್ಥ ನೇತೃತ್ವದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಪುತ್ತೂರಿನ ಗ್ರಾಹಕರ ನೆಚ್ಚಿನ ಸಂಸ್ಥೆ ಎನಿಸಿಕೊಂಡ ತಿರುಮಲ ಹೋಂಡಾ ಈಗ ಹೊಸ ಉತ್ಸಾಹ ಹಾಗೂ ಹೊಸ ಚೈತನ್ಯದೊಂದಿಗೆ ಗ್ರಾಹಕರ ನಗುಮೊಗದ ಸೇವೆಗೆ ಸಿದ್ಧವಾಗಿದೆ.‌