Recent Posts

Sunday, January 19, 2025
ಕ್ರೈಮ್ಬೆಂಗಳೂರುರಾಜಕೀಯರಾಜ್ಯಸುದ್ದಿ

ಪತಿ ಹತ್ಯೆಯಾದ 3 ವರ್ಷದಲ್ಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್‌ರ ಬರ್ಬರ ಕೊಲೆ! – ಕಹಳೆ ನ್ಯೂಸ್

ಬೆಂಗಳೂರು, ಜೂ.24 : ಲಾಕ್‌‌ಡೌನ್‌‌ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಕಿಟ್ ವಿತರಿಸಲು ತೆರಳಿದ್ದಂತ ಮಾಜಿ ಕಾರ್ಪೋರೇಟ್ ರೇಖಾ ಕದಿರೇಶ್ ಅವರನ್ನು, ಇಂದು ಬೆಳಗ್ಗೆ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

2018ರ ಫೆಬ್ರವರಿ 8ರಂದು ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಅವರ ಪತಿ, ಕದಿರೇಶ್ ಅವರನ್ನು ಶೋಭನ್ ಅಂಡ್ ಗ್ಯಾಂಗ್ ಕೊಚ್ಚಿ ಕೊಲೆ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರುತು ಮಾಹಿತಿ ನೀಡಿರುವಂತ ಪಶ್ಚಿಮ ವಿಭಾಗದ ಡಿಸಿಪಿ  ಸಂಜೀವ್ ಪಾಟೀಲ್, “ಶೋಭನ್ ಜೊತೆಗೆ ಇದ್ದ ಹಳೆಯ ರೌಡಿಶೀಟರ್, ಪೀಟರ್‌‌ನಿಂದ ರೇಖಾ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತ ಪಡಿಸಿದ್ದು, ಅಲ್ಲದೇ ಕೊಲೆಗೆ ಪೂರ್ವದಲ್ಲೇ ಸಂಚು ರೂಪಿಸಲಾಗಿದ್ದು, ರೇಖಾ ಕದಿರೇಶ್ ಪುಡ್ ಕಿಟ್ ವಿತರಿಸುತ್ತಿದ್ದಂತ ಏರಿಯಾದಲ್ಲಿನ ಸಿಸಿಟಿವಿ ಮೇಲೆ ತಿರುಗಿಸಿ, ಕೊಲೆಯು ಗೊತ್ತಾಗದಂತೆ, ಹಲ್ಲೆ ನಡೆಸಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನು ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ಯಾವುದೇ ಮಾಹಿತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.