Recent Posts

Sunday, January 19, 2025
ರಾಷ್ಟ್ರೀಯಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶವನ್ನು ಜು.31ರೊಳಗೆ ಘೋಷಿಸಬೇಕು ; ರಾಜ್ಯಗಳಿಗೆ ಸುಪ್ರಿಂ ಕೋರ್ಟ್ ನಿರ್ದೇಶನ – ಕಹಳೆ ನ್ಯೂಸ್

ನವದೆಹಲಿ, ಜೂ.24 : ಎಲ್ಲಾ ರಾಜ್ಯ ಮಂಡಳಿಗಳು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಆಂತರಿಕ ಮೌಲ್ಯಮಾಪನ ಯೋಜನೆಯನ್ನು ಸಿದ್ಧಪಡಿಸಿ ಜುಲೈ 31 ರೊಳಗೆ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ತಿಳಿದು ಬಂದಿದೆ.

ಜೂನ್ ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಲು ಪರ್ಯಾಯ ಮೌಲ್ಯಮಾಪನ ಮಾನದಂಡಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಸಿಬಿಎಸ್‌ಇ ಮತ್ತು ಸಿಐಎಸ್ ಸಿಇ ಮಂಡಳಿಗಳಿಗೆ ಎರಡು ವಾರಗಳ ಸಮಯವನ್ನು ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಎರಡೂ ಮಂಡಳಿಗಳು ಕಳೆದ ವಾರ ಮೌಲ್ಯಮಾಪನ ಮಾನದಂಡಗಳನ್ನು ಮಂಡಿಸಿದ್ದು,ಅದನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್, ಈ ಮಾದರಿ “ನ್ಯಾಯಯುತ ಮತ್ತು ಸಮಂಜಸ” ಎಂದು ಅಭಿಪ್ರಾಯಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಬಿಎಸ್‌ಇ ಮತ್ತು ಸಿಐಎಸ್‌ ಸಿಇ ನಡೆಸುವ ಮುಖ್ಯ ಪರೀಕ್ಷೆಗಳ ಫಲಿತಾಂಶಗಳನ್ನು ಜುಲೈ 31 ರೊಳಗೆ ಘೋಷಿಸಬೇಕಾಗಿದೆ