Friday, September 20, 2024
ರಾಜಕೀಯ

ಪುತ್ತೂರಿನಲ್ಲಿ ಸಂಜೀವ ಮಠಂದೂರು ಗೆಲುವು, ಈ ಬಾರಿ ಬಿಜೆಪಿ ಸರಕಾರ ; ಹೀಗೊಂದು ಸಮೀಕ್ಷೆ – ಕಹಳೆ ನ್ಯೂಸ್

ಪುತ್ತೂರು : ಈ ಭಾರಿಯ ಚುನಾವಣೆಯಲ್ಲಿ ಸಂಜೀವ ಮಠಂದೂರು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುಲು ಪ್ರಮುಖ ಕಾರಣ ಏನು ಬಲ್ಲಿರಾ?

ಕಳೆದ ಭಾರಿಯ ಸ್ಪರ್ಧೆ . ಭಾರತೀಯ ಜನತಾಪಕ್ಷ ಕಳೆದ ಸಲ ಸೋಲುತ್ತಿಲಿಲ್ಲ ಆದರೆ, ಸೋಲಿಸಿದರು. ಈ ಭಾರಿಯೂ ಅದೇ ಮರುಳಿಸಲು ಅವಶಾಶ ಕಡದೇ ಇರುವುದು ತಾಲೂಕಿನ ಹಿತದ ದೃಷ್ಟಿಯಿಂದ ಉತ್ತಮ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸಂಜೀವ ಮಠಂದೂರು ಯಾರು?

ಉಪ್ಪಿನಂಗಡಿಯ ಹಿರೇಬಂಡಾಡಿ ನಿವಾಸಿ, ಎಳವೆಯಲ್ಲೇ ಸಂಘದ ಶಿಕ್ಷಣ ಪಡೆದು ನಂತರ ಸಹಕಾರಿ ಕ್ಷೇತ್ರದಲ್ಲೂ ಗುರುತಿಸಿಕೊಂಡು, ಸಂಘ ಪರಿವಾರದ ಹಿರಿಯರ ಅಪೇಕ್ಷೆಯಂತೆ ರಾಜಕೀಯ ರಂಗ ಪ್ರವೇಶಿಸಿ ಕಳೆದ ಸಲ ರಾಜ್ಯಾದ್ಯಂತ ಬಿಜೆಪಿ ವಿರೋಧಿ ಅಲೆ ಇದ್ದಾಗಲೂ, ಹಾಲಿ ಶಾಸಕಿ ಶಕುಂತಲಾ ಶೆಟ್ಟಿ ಪರವಾಗಿ ತಾಲೂಕಿನಲ್ಲಿ ಅನುಕಂಪ ಇದ್ದರೂ ಸಂಜೀವ ಮಠಂದೂರು ಪ್ರಬಲ ಸ್ಪರ್ಧೆ ನೀಡಿ ಕೆಲವು ಕೆಲವೇ ಕೆಲವು ಮತಗಳ ಅಂತರದಿಂದ ಸೋತರು.

ಕಳೆದ ಭಾರಿಯ ಸೋಲಿಗೆ ಕಾರಣ?

ದಿನೇಶ್ ಸ್ಪರ್ಧೆ, ಬಿಜೆಪಿಯ ಆಂತರಿಕ ನಾಯಕ ಕಚ್ಚಾಟಗಳೇ ಕಳೆದ ಸಲ ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳಾಗಿದ್ದವು.

ಈ ಭಾರಿ ಗೆಲುವಿನತ್ತ ಸಂಜೀವ ಮಠಂದೂರು :

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಸಂಜೀವ ಮಠಂದೂರು ಪ್ರಬಲ ಅಭ್ಯರ್ಥಿ , ಮೃದು ಸ್ವಭಾವ, ಸಾತ್ವಿಕ ವ್ಯಕ್ತಿತ್ವ. ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಸಂಜೀವ ಮಠಂದೂರು ಪರ ಇಂದು ಪ್ರಚಾರ ಮಾಡುತ್ತಿವೆ.

ಸಂಜೀವ ಮಠಂದೂರಿಗೆ ಬಿಜೆಪಿಯ ಎಲ್ಲಾ ನಾಯಕ ಬೆಂಬಲ, ಕಾರ್ಯಕರ್ತರ ಬೆಂಬಲ. ನಾಮಪತ್ರ ಸಲ್ಲಿಕೆಗೆ ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಸೇರಿದ್ದು ಇದ್ದಕ್ಕೆ ಸಾಕ್ಷಿ..

ಜಾತಿ ಮತ ಭೇದ ವಿಲ್ಲದೆ ಮಠಂದೂರು ಬೆಂಬಲಿಸುವ ಪುತ್ತೂರಿನ ಜನ, ಈ ಭಾರಿ ಬಿಜೆಪಿಯನ್ನು ಪುತ್ತೂರಿನಲ್ಲಿ ಅಧಿಕಾರಕ್ಕೆ ತರಲಿದ್ದಾರೆ ಎಂಬುದು ಶಥ ಸಿದ್ಧ.

ಈ ಬಾರಿ ಬಿಜೆಪಿ ಸರಕಾರ ನಿಶ್ಚಿತ ರೈತರಿಗೆ ಕುಮ್ಕಿಭೂಮಿ ಹಕ್ಕು ಖಚಿತ : 


ಶತಮಾನಗಳಿಂದ ಕುಮ್ಕಿಭೂಮಿಯ ಸೌಲಭ್ಯವನ್ನು ಬಳಸಿಕೊಂಡು ತನ್ನ ಕೃಷಿ ಕಾರ್ಯಗಳನ್ನು ಇಂದಿಗೂ ನಡೆಸುತ್ತಿರುವ ಇಲ್ಲಿನ ರೈತರಿಗೆ ಕುಮ್ಕಿ ಅನಿವಾರ್ಯ. ಕುಮ್ಕಿ ಇಲ್ಲದೆ ಕೃಷಿ ಅಸಾಧ್ಯ. ಸೊಪ್ಪುಕಡಿಯಲು, ಗೋಚರಾವು ಇತ್ಯಾದಿ ವಿಷಯಗಳಿಗೆ ಕೃಷಿಕರಿಗೆ ಕುಮ್ಕಿಭೂಮಿ ಅಗತ್ಯವಾಗಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ರೈತರಿಗೆ ಕುಮ್ಕಿ ಹಕ್ಕನ್ನು ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿತ್ತು. ಈ ಕುರಿತು ಗೆಜೆಟ್ ಪ್ರಕಟನೆ ಮಾತ್ರ ಬಾಕಿ ಇತ್ತು. 


ಕಾಂಗ್ರೆಸ್ ಏನು ಮಾಡಿತು..?


ಬಿಜೆಪಿ ಸರಕಾರ ಕೃಷಿಕರಿಗೆ ಕುಮ್ಕಿ ಸೌಲಭ್ಯವನ್ನು ಅವರ ಹಕ್ಕಾಗಿ ನೀಡಲು ಮುಂದೆ ಬಂದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕುಮ್ಕಿಭೂಮಿಯನ್ನೇ ಅನುಭೋಗದಾರ ಕೃಷಿಕರಿಂದ ವಿರಹಿತಪಡಿಸಿ ಸರಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಿದ್ಧತೆ ಮಾಡಿತು. ಕುಮ್ಕಿಭೂಮಿ ಸಂಬಂಧಪಟ್ಟ ಭೂಮಿಯ ಒಡೆಯನ ವಶದಲ್ಲಿದ್ದರೂ, ಇದು ಆತನಿಗೆ ದೊರೆತಿರುವ ಸೌಲಭ್ಯವಾದರೂ, ಇದರ ಉಪಯೋಗದ ಅಧಿಕಾರವನ್ನು ರೈತರಿಂದ ಕಸಿದುಕೊಳ್ಳಲು ಸರಕಾರ ಸಿದ್ಧತೆ ಮಾಡಿತು. ರೈತರ ಪರ ಕೆಲಸ ಮಾಡುತ್ತಿರುವ ರಾಷ್ಟ್ರೀಯವಾದಿ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕುಮ್ಕಿ ಅನುಭೋಗದಾರರ ಪರ ರಿಟ್ ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ರೈತರ ಪರ ಹೋರಾಟ ನಡೆಸಿ ಜಯಗಳಿಸಿತು.
ಬಿಜೆಪಿ ಬಂದರೆ ಕುಮ್ಕಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಕುಮ್ಕಿಭೂಮಿಯ ಹಕ್ಕು ದೊರೆಯುವುದು ಖಚಿತ. ಯಾಕೆಂದರೆ ಕುಮ್ಕಿ ಹಕ್ಕಿನ ಕುರಿತಾಗಿ ಬಿಜೆಪಿ ರೈತರ ಪರ ನಿರಂತರವಾಗಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಹೋರಾಟಗಳನ್ನು ಮಾಡುತ್ತಾ ಬಂದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಓರ್ವ ಕೃಷಿಕರಾಗಿದ್ದು, ತಾವು ಶಾಸಕರಾಗಿ ಆಯ್ಕೆಯಾದರೆ ಕುಮ್ಕಿ ಹಕ್ಕಿನ ಕುರಿತು ಹೋರಾಟ ನಡೆಸಿ ಕೃಷಿಕರಿಗೆ ನ್ಯಾಯ ಒದಗಿಸಿ ಕೊಡುವುದಾಗಿ ಬಹಿರಂಗವಾಗಿ ಹೇಳಿದ್ದಾರೆ.


ಹಾಲಿ ಶಾಸಕರು ಮೌನ : 


ಕುಮ್ಕಿ ಹಕ್ಕಿನ ಕುರಿತಂತೆ ಹಾಲಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಕಳೆದ 5 ವರ್ಷಗಳ ಅವಧಿಯಲ್ಲಿ ಮೌನ ಮುರಿದಿಲ್ಲ. ವಿಧಾನಸಭೆಯಲ್ಲಿ ಮಾತನಾಡಲಿಲ್ಲ. ರೈತರ ಕುಮ್ಕಿ ಹಕ್ಕನ್ನು ವಿರಹಿತಗೊಳಿಸಲು ತಮ್ಮದೇ ಕಾಂಗ್ರೆಸ್ ಸರಕಾರ ಪ್ರಯತ್ನಿಸುವಾಗ ತನ್ನ ತವರು ಜಿಲ್ಲೆಯ ರೈತರಿಗೆ ಅತೀ ಅಗತ್ಯವಾದ ಕುಮ್ಕಿ ಸೌಲಭ್ಯ ಬೇಕೇ ಬೇಕು ಎಂದು ಕಂದಾಯ ಸಚಿವರನ್ನು ಅಥವಾ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಿಲ್ಲ. ಪುತ್ತೂರು ವಿಧಾನಸಭಾ ಕ್ಷೇತ್ರದ ಕೃಷಿಕ ಮತದಾರರೇ ಈಗ ಹೇಳಿ ಯಾರು ಹಿತವರು ನಿಮಗೆ.