Recent Posts

Monday, January 20, 2025
ಉಡುಪಿದಕ್ಷಿಣ ಕನ್ನಡಸಿನಿಮಾಸುದ್ದಿ

ತೆರೆ ಕಾಣಲು ಸಜ್ಜಾಗಿದೆ ‘ಕಲ್ಜಿಗಡೊಂಜಿ ಬಿನ್ನಯ’ – ಸತ್ಯದ ತುಳುವೆರ್(ರಿ.) ಉಡುಪಿ ಮಂಗಳೂರು ಅರ್ಪಿಸುವ ತುಳು ಗೀತೆ – ಕಹಳೆ ನ್ಯೂಸ್

ಸತ್ಯದ ತುಳುವೆರ್(ರಿ.) ಉಡುಪಿ ಮಂಗಳೂರು ಅರ್ಪಿಸುವ, ‘ಕಲ್ಜಿಗಡೊಂಜಿ ಬಿನ್ನಯ’ ತುಳು ಗೀತೆ ವಿಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕೊರೋನಾ ಕಷ್ಟದ ಸಮಯದಲ್ಲಿ ಕಾಲದ ಜೊತೆ ಮಾಡುವ ವಿನಂತಿ ಎಂಬ, ‘ಕಲ್ಜಿಗಡೊಂಜಿ ಬಿನ್ನಯ’ ತುಳು ಗೀತೆ ಇದೆ ಬರುವ ತಾರೀಕು ೦೫-೦೭-೨೦೨೧ಕ್ಕೆ ಸತ್ಯದ ತುಳುವೆರ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಪ್ರಕಾಶ್.ಎಸ್, ಪ್ರವೀಣ್ ಕುರ್ಕಾಲ್, ಜಗನ್ ಕೋಟ್ಯಾನ್, ಪ್ರಸಾದ್ ಪೂಜಾರಿ ಬಂಟ್ವಾಳ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಗೀತೆಗೆ ಅಮರ್‌ನಾಥ್ ಪೂಪಾಡಿಕಲ್ಲು ಇವರ ಸಾಹಿತ್ಯವಿದೆ. ರಾಜೇಶ್ ಮುಡಿಪು ಹಾಗೂ ಶರ್ಮಿಳ ರಾಕೇಶ್ ಇವರ ಇಂಪಾದ ಕಂಠದಲ್ಲಿ ಹಾಡು ಮೂಡಿ ಬರಲಿದ್ದು, ಸಂತೋಷ್ ಪುಜ್ಜೆರ್ ಮಿಕ್ಸಿಂಗ್-ಮಾಸ್ಟರಿ೦ಗ್ ಕೆಲಸ ಮಾಡಿದ್ದು, ಪ್ರಚಾರ ಕಲೆ ಸಂಕಲನವನ್ನ ಕಿರಣ್ ಕೊಯಿಲ ಮಾಡಿದ್ದಾರೆ. ಒಟ್ಟಿನಲ್ಲಿ ಹೊಸ ಪ್ರಯತ್ನದ ಮೂಲಕ ವರ್ತಮಾನದ ಸ್ಧಿತಿಗತಿಯನ್ನ ವೀಕ್ಷಕರ ಮುಂದೆ ವಿಸ್ತಾರವಾಗಿ ನೀಡಲು ‘ಕಲ್ಜಿಗಡೊಂಜಿ ಬಿನ್ನಯ’ ತಂಡ ಸಜ್ಜಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು