Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿರುವ ಕಾಡೂರಿನ ಯುಕ್ತಿ ಶೆಟ್ಟಿ – ಸಾಮಾಜಿಕ ಜಾಲತಾಣದ ಮೂಲಕ ಮಗುವಿಗೆ ಸಹಾಯಹಸ್ತ – ಕಹಳೆ ನ್ಯೂಸ

ಕಾಡೂರು

ಕಾಡೂರು ಗ್ರಾಮದ ಮುಂಡಾಡಿ ಬಡಾಬೆಟ್ಟು ಯುಕ್ತಿ ಶೆಟ್ಟಿ (9) ಎಂಬ ಮಗು ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿದೆ. ಮಗುವಿನ ಚಿಕಿತ್ಸೆಗಾಗಿ ಕಷ್ಟ ಪಡುತ್ತಿರುವ ಈ ಕುಟುಂಬಕ್ಕೆ ಬಿಲ್ಲಾಡಿ ಗ್ರಾಮಪಂಚಾಯತ್ ಮಾಜಿ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಅವರ ನೇತ್ರತ್ವದಲ್ಲಿ, ಸಾಮಾಜಿಕ ಜಾಲತಾಣದ ಒiಟಚಿಚಿಠಿ ಆಫ್ ಮುಖಾಂತರ ಹಾಗೂ ವಿವಿಧ ಧಾನಿಗಳ ಮೂಲಕ  1.52 ಲಕ್ಷ ಮೊತ್ತ ಒಟ್ಟುಗೋಡಿಸಿ, ಇಂದು ಯುಕ್ತಿ ಶೆಟ್ಟಿಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಸಾಮಾಜಿಕ ಜಾಲತಾಣ ಕೇವಲ ಮನೋರಂಜನೆಗೆ ಮಾತ್ರವಲ್ಲ ಸಾಮಾಜಿಕ ಕಳಕಳಿಯೂ ನಮ್ಮಲ್ಲಿದೆ ಎಂದು ಸಹೃದಯ ದಾನಿಗಳು ತೋರಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರು ಈಗಾಗಲೇ ಮಗುವಿಗೆ ಸಾಕಷ್ಟು ಮೊತ್ತವನ್ನ ಒದಗಿಸುವಲ್ಲಿ ಪ್ರಮುಖ ಪಾತ್ರಹಿಸಿದ ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ಶೆಟ್ಟಿ ಮುಂಡಾಡಿ, ವಿಶ್ವಜ್ಞಾನ ಹಿ.ಪ್ರಾ ಶಾಲೆ ಮುಖ್ಯೋಪದ್ಯಾಯ ಸುಧೀರ್ ಶೆಟ್ಟಿ ಮುಂಡಾಡಿ ಉಪಸ್ಥಿತರಿದ್ದರು…

ಜಾಹೀರಾತು
ಜಾಹೀರಾತು
ಜಾಹೀರಾತು