ಭರತನಾಟ್ಯದಲ್ಲಿ ಕುಮಾರಿ ಸನುಷಾರ ಮುಡಿಗೇರಿದ “ಸ್ವರ್ಣ ಕಲಾ ರತ್ನ” ರಾಜ್ಯ ಪ್ರಶಸ್ತಿ – ಕಹಳೆ ನ್ಯೂಸ್
ಅಕ್ಷರದೀಪ ಫೌಂಡೇಶನ್ ಸ್ನೇಹಜೀವಿ ಫೌಂಡೇಶನ್ ಹಾಗೂ ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಮತ್ತು ಬೆಂಗಳೂರು ಇದರ ಸಹಭಾಗಿತ್ವದಲ್ಲಿ ಆಯೋಜಿಸಿದ, ರಾಜ್ಯಮಟ್ಟದ ಕ್ರೇಜಿ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಕುಮಾರಿ ಸನುಷಾ ಅವರಿಗೆ ಸ್ವರ್ಣ ಕಲಾ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
ಆನ್ ಲೈನ್ ಮೂಲಕ ಆಯೋಜಿಸಿದ ಕ್ರೇಜಿ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಕುಮಾರಿ ಸನುಷಾ ಭಾಗವಹಿಸಿದ್ದು ಭರತನಾಟ್ಯ ವಿಭಾಗದಲ್ಲಿ ವಿಜೇತರಾಗಿ ಸ್ವರ್ಣ ಕಲಾ ರತ್ನ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬೂಡು ಮುಗೇರ್ ಅರಸಿನಮಕ್ಕಿ ಶ್ರೀಮತಿ ಸೌಮ್ಯ ಹಾಗೂ ರಾಜನ್ ದಂಪತಿಯ ಸುಪುತ್ರಿಯಾಗಿರುವ ಇವರು ಕೊಕ್ಕಡ ಸೈಂಟ್ ಫ್ರಾನ್ಸಿನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಹಲವಾರು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಆನ್ ಲೈನ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಹಲವು ಪ್ರಶಸ್ತಿ ಪಾರಿತೋಷಕಗಳಿ ಇವರ ಮುಡಿಗೇರಿದೆ.
ಅಂತೆಯೇ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ನೀಡುವ ವರ್ಷದ “ನಟವರ್ಯ ಕಲಾ ಸಾಧಕಿ” ಬಿರುದು ಪಡೆದುಕೊಂಡಿರುತ್ತಾರೆ. ಅಂತೆಯೇ ಹುಟ್ಟೂರ ಕಲಾಸಾಧಕಿ ಸನ್ಮಾನವನ್ನು ತಮ್ಮದಾಗಿಸಿಕೊಂಡಿರುವ ಇವರು, ಕಳೆದ ೬ ವರ್ಷಗಳಿಂದ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ವಿದ್ವಾನ್ ದೀಪಕ್ ಕುಮಾರ್ ವಿದುಷಿ ಪ್ರೀತಿಕಲಾ ವಿದ್ವಾನ್ ಗಿರೀಶ್ ಕುಮಾರ್ ರವರಿಂದ ಭರತನಾಟ್ಯ ನೃತ್ಯಾಭ್ಯಾಸ ಕಲಿಯುತ್ತಿದ್ದು,ಸಂಗೀತ ಶಿಕ್ಷಣವನ್ನು ಪದ್ಮಾವತಿ ಬಾಳ್ತಿಲ್ಲಾಯ ರವರಿಂದ ಅಭ್ಯಾಸಿಸುತ್ತಿದ್ದಾರೆ.
ಅಂತೆಯೇ ಇವರು ಕುಶಾಲಪ್ಪ ನಮ್ಮ ಕಲಾವಿದೆರ್ ನೆಲ್ಯಾಡಿ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಯಲ್ಲಿ ಅಕ್ಷಯ್ ಎಚ್ ಪುತ್ತೂರು ಕಿರಣ್ ಮುರಳಿ ಮುರಳಿ ಬ್ರದರ್ಸ್ ಪುತ್ತೂರು ನಾಟ್ಯ ವಿದುಷಿ ಹಿಮಾ ತಿರುಮಲೇಶ್ ಗೌಡ ಹಾಗೂ ಸುಮಂತ್ ಆಚಾರ್ಯ ಪುಂಜಾಲಕಟ್ಟೆ ಇವರಿಂದ ಕಥಕ್ ಹಾಗೂ ವೆಸ್ಟರ್ನ್ ನೃತ್ಯಭ್ಯಾಸ ಕಲಿಯುತ್ತಿದ್ದಾರೆ. ಇವರು ಎಳೆಯ ವಯಸ್ಸಿನಿಂದಲೇ ನೃತ್ಯ ಲೋಕಕ್ಕೆ ಪಾದಾರ್ಪಣೆಗೈದು ನೃತ್ಯದಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿAದ ಹಲವು ಕಡೆ ನೃತ್ಯ ಪ್ರದರ್ಶನ ನೀಡಿ ನೃತ್ಯದಲ್ಲಿ ಹಲವಾರು ಪ್ರಶಸ್ತಿ ಪಡೆದು ಊರಿಗೆ ತಂದೆ ತಾಯಿ ನೃತ್ಯ ಕಲಿತಿರುವ ಸಂಸ್ಥೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ಇನ್ನು ರಾಜೇಶ್ ಬಿಸಿ ರೋಡ್ ನಿರ್ಮಾಣದ ಶಿವರಾತ್ರೆದ ಏಲ್ಯ ಗಳಿಗೆಡ್ ತುಳುವ ಪುಣ್ಯ ಮಟ್ಟೆಲ್ ದ ಮಾಮಲ್ಲ ಕಾರ್ಣಿಕ ಮಣ್ಣು ಕುದ್ರೋಳಿ ಗೋಕರ್ಣನಾಥೇಶ್ವರ ದೇವೆರ್ ನ ಭಕ್ತಿ ಸುಗಿಪು “ರಾಗ ಅಭಿಷೇಕ” ಈ ಆಲ್ಬಂ ಸಾಂಗ್ ನಲ್ಲಿ ನಟಿಸಿರುತ್ತಾರೆ.