Saturday, November 23, 2024
ಜಿಲ್ಲೆವಾಣಿಜ್ಯಸುದ್ದಿ

ಲಾಕ್‌ಡೌನ್‌ನಿಂದ ಪ್ರಮುಖ ಧಾರ್ಮಿಕ ಕೇಂದ್ರಗಳ ಆದಾಯಕ್ಕೆ ಕುತ್ತು..!- ಯಾವ-ಯಾವ ದೇವಾಲಯಕ್ಕೆ ಎಷ್ಟು ರೂ ನಷ್ಟ…? – ಕಹಳೆ ನ್ಯೂಸ್

ಕೊರೊನಾ ಮಹಾಮಾರಿಗೆ ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನ ಗಳಿಗೆ ಕೊಟ್ಯಾಂತರ ರೂ ಆರ್ಥಿಕ ನಷ್ಟವುಂಟಾಗಿದ್ದು , ಅದರಲ್ಲಿ ಕೆಲವು ಪ್ರಮುಖ ದೇವಾಲಯಗಳ ಅಂದಾಜು ನಷ್ಟದ ಲೆಕ್ಕಾಚಾರ ಸಿಕ್ಕಿದೆ.


ರಾಜ್ಯದ ಪ್ರಮುಖ 15 ದೇವಸ್ಥಾನಗಳ ಸರಾಸರಿ ಅಂದಾಜು ಲೆಕ್ಕವನ್ನು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ನೀಡಿದ್ದು , ಕಳೆದ ಎರಡು ತಿಂಗಳಿನಲ್ಲಿ 89.5 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.ಅದರಲ್ಲಿ ದ.ಕ.ಜಿಲ್ಲೆಯ ಇತಿಹಾಸ ಪ್ರಸಿದ್ಧ ದೇವಸ್ಥಾನವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 22 ಕೋಟಿ ನಷ್ಟವುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಉಳಿದಂತೆ ಎಡಯೂರು ದೇವಸ್ಥಾನಕ್ಕೆ 19 ಕೋಟಿ, ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನ ಕ್ಕೆ 10 ಕೋಟಿ, ಮೈಸೂರು ಚಾಮುಂಡಿ ದೇವಸ್ಥಾನಕ್ಕೆ 7 ಕೋಟಿ , ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಕ್ಕೆ 7 ಕೋಟಿ , ನಂಜನಗೂಡು ದೇವಸ್ಥಾನ ಕ್ಕೆ 5. ಕೋಟಿ, ಸವದತ್ತಿ ದೇವಸ್ಥಾನ ಕ್ಕೆ 3.5 ಕೋಟಿ, ಮಂದಾರ್ತಿ 2.5 ಕೋಟಿ, ಬನಶಂಕರಿ 2.5 ಕೋಟಿ, ಘಾಟಿ ಸುಬ್ರಹ್ಮಣ್ಯ 2 ಕೋಟಿ, ಹುಲಿಗಮ್ಮ ಕೊಪ್ಪಳ 2.5 ಕೋಟಿ, ಪುತ್ತೂರು ಮಹಾಲಿಂಗೇಶ್ವರ 1.5 ಕೋಟಿ, ಕದ್ರಿ ಮಂಜುನಾಥ ದೇವಾಲಯ ಕ್ಕೆ 3 ಕೋಟಿ, ಅಂಬಲಪಾಡಿ 1 ಕೋಟಿ ಹಾಗೂ ಬಂಟ್ಚಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ 2 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಅವರು ಲೆಕ್ಕ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹುತೇಕ ಎಲ್ಲಾ ದೇವಸ್ಥಾನ ಹಾಗೂ ದೈವಸ್ಥಾನಗಳು ಭಕ್ತರ ಆಗಮನವಿಲ್ಲದೆ ಮೌನವಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರನ್ನು ನಂಬಿ ಜೀವನ‌ಮಾಡುತ್ತಿದ್ಧ ಅದೆಷ್ಟು ಕುಟುಂಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣ ವಾಗಿದೆ. ಒಟ್ಟಿನಲ್ಲಿ ಕೊರೊನಾ‌ ಮಹಾಮಾರಿಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಆದಷ್ಟು ಬೇಗ ಕೊರೊನಾ ಸಂಕಷ್ಟ ದೂರವಾಗಿ ಎಲ್ಲವೂ ಹಿಂದಿನಂತೆ ನಡೆಯಲಿ ಎಂಬುದೇ ಎಲ್ಲರ ಆಶಯ.