Saturday, November 23, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಾಣಿ ಗ್ರಾಮದ ಇತಿಹಾಸ ಬೆಳಕು ಚೆಲ್ಲುವ ಅಪೂರ್ವ ಶಿಲಾಶಾಸನ ದಾಸಗದ್ದೆಯಲ್ಲಿ ಪತ್ತೆ – ಕಹಳೆ ನ್ಯುಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಮಾಣಿಗ್ರಾಮದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅಪೂರ್ವ ಐತಿಹಾಸಿಕ ಶಿಲಾಶಾಸನ ವೀರಕಂಭ ಸಮೀಪದ ಶ್ರೀ ಗುಡ್ಡೆ ಚಾಮುಂಡಿ- ಪಂಜುರ್ಲಿ- ಮಲೆಕೊರತಿ ದೈವಗಳ ಚಾವಡಿ ದಾಸಗದ್ದೆಯ ಕಂಬಳದ ಗದ್ದೆಯ ಬದಿಯಲ್ಲಿ ಪತ್ತೆಯಾಗಿದೆ.


ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಚಿತ್ರದ ನಡುವಿನಲ್ಲಿ ಶಿವಲಿಂಗದ ಚಿತ್ರವಿದೆ. ಬರಹಗಳು ತುಂಬಾ ಇದ್ದು ಅಸ್ಪಷ್ಟವಾಗಿದೆ ಮತ್ತು ಅಪೂರ್ವ ಮಾಹಿತಿಯನ್ನು ಒದಗಿಸುವ ಸಾದ್ಯತೆ ಇದೆ. ಇದು ಪ್ರಾಚೀನ ಕಾಲ ರಾಜ ಮಹಾರಾಜರ ಕಾಲದಲ್ಲಿ ದಾನ ಭೂಮಿಯನ್ನು ಗುರುತಿಸುವ ಕಲ್ಲೇ…? ಅಥವಾ ಬಂಗರಸನ ಕಾಲದಲ್ಲಿ ಪ್ರತೀ ಗ್ರಾಮದ ದೇವರು ಮತ್ತು ದೈವಗಳ ವ್ಯಾಪ್ತಿಯಲ್ಲಿ ಬರುವ ಭೂಮಿಯನ್ನು ಗುರುತಿಸಲ್ಪಡುವ ಉದ್ದೇಶದಿಂದ ಸ್ತಾಪಿಸಿದ ಕಲ್ಲು ಇದಾಗಿರಬಹುದೇ ಎಂಬುದು ಸದ್ಯದ ಕುತೂಹಲ.

ಜಾಹೀರಾತು
ಜಾಹೀರಾತು
ಜಾಹೀರಾತು


ನಾಲ್ಕು ಗುತ್ತು ಮೂರು ಗ್ರಾಮದ, ಅರಸು ದೈವ ಶ್ರೀ ಗುಡ್ಡೆ ಚಾಮುಂಡಿ ದೈವ ಈ ಪರಿಸರದಲ್ಲಿ ಗ್ರಾಮ ದೈವವಾಗಿದ್ದು, ಸೀಮೆಯ ಅರಸು ದೈವಗಳಿಂದ ಅರ್ಧ ಸೀಮೆಯ ಭೂ ಭಾಗದ ಅಧಿಕಾರವನ್ನು ಸೆಳೆದುಕೊಂಡ ದೈವ ಎಂಬ ಹೆಗ್ಗಳಿಕೆ ಇದೆ. ಈ ದೈವದ ಅಧೀನದಲ್ಲಿ ಮೂರು ಗ್ರಾಮದಲ್ಲಿ 16ಕ್ಕೂ ಹೆಚ್ಚು ಕಂಬಳ ಗದ್ದೆಗಳು ಒಳಪಡುತ್ತದೆ. ಈ ದಾಸಗದ್ದೆ ಅಥವಾ ದಾಸಖಂಡ ಕಂಬಳದ ಗದ್ದೆಯ ಬದಿಯಲ್ಲಿ ದೈವಗಳ ಚಾವಡಿ ಸಮೀಪದಲ್ಲಿ ಈ ಶಿಲಾ ಶಾಸನ ಪತ್ತೆಯಾಗಿರುವುದು ಐತಿಹಾಸಿಕವಾಗಿ ಒಂದು ಮಹತ್ವದ ಸಂಗತಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಜ್ಞ ಇತಿಹಾಸಕಾರರು ಇದನ್ನು ಓದುವ ಪ್ರಯತ್ನ ಮಾಡಿದರೆ ಈ ಶಾಸನ ಕಲ್ಲಿನ ರೋಚಕ ಇತಿಹಾಸ ಬೆಳಕಿಗೆ ಬರಬಹುದು ಎಂದು ನಂಬಲಾಗಿದೆ.