Friday, November 22, 2024
ದಕ್ಷಿಣ ಕನ್ನಡಸುದ್ದಿ

ಪುಂಜಾಲಕಟ್ಟೆಯಲ್ಲಿ ಬೀಳುವ ಸ್ಧಿತಿಯಲ್ಲಿದ್ದ ಮರ ತೆರವು – ಸಂಭಾವ್ಯ ದುರಂತ ತಪ್ಪಿಸಿದ ಜಿ.ಪಂ. ಸದಸ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ – ಕಹಳೆ ನ್ಯೂಸ್

ಮಂಗಳೂರು : ಪುಂಜಾಲಕಟ್ಟೆಯಲ್ಲಿ ಬೀಳುವ ಸ್ಧಿತಿಯಲ್ಲಿದ್ದ ಮರವೊಂದನ್ನ ಜಿ.ಪಂ. ಸದಸ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತೆರವುಗೊಳಿಸುವ ಮೂಲಕ ಸಂಭವಿಸಬಹುದಾಗಿದ್ದ ಅನಾಹುತವನ್ನ ತಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಆರಕ್ಷಕ ಠಾಣೆ ಸಮೀಪದಲ್ಲಿರುವ, ಮಾರ್ಗದ ಬಳಿ ಬೆಳೆದು ನಿಂತ ಮಹಾ ವೃಕ್ಷವೊಂದು ಬೀಳುವ ಹಂತದಲ್ಲಿದ್ದು, ಅನೇಕ ವಾಹನಗಳು ಮತ್ತು ಪಾದಾಚಾರಿಗಳು ಸಂಚರಿಸುವ, ಜನನಿಬಿಡ ರಸ್ತೆಯಲ್ಲಿ ಪ್ರಾಣಕ್ಕೆ ಕುತ್ತು ತರುವ ರೀತಿ ಇತ್ತು, ಇದನ್ನ ಕಂಡ ಸ್ಥಳೀಯರು ಜಿ.ಪಂ. ಸದಸ್ಯ ಯಂ. ತುಂಗಪ್ಪ ಬಂಗೇರರ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ, ಸ್ಥಳೀಯರ ಸಹಕಾರದಿಂದ ವೃಕ್ಷವನ್ನು ಕಡಿದುರುಳಿಸಲಾಗಿದ್ದು, ಸಂಭಾವ್ಯ ದುರಂತವನ್ನು ತಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರಕ್ಷಕ ಠಾಣೆಗೆ ಮಾಹಿತಿ ನೀಡಿದಾಗ ಅಲ್ಲಿಂದ ಯಾವ ಸ್ಪಂದನೆಯೂ ದೊರಕಲಿಲ್ಲ. ಹಾಗಾಗಿ ಇಂದು ಯಂ.ತುAಗಪ್ಪ ಬಂಗೇರ, ಪಿಲಾತಬೆಟ್ಟು ಪಂ.ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಪಿಲಾತಬೆಟ್ಟು ವ್ಯ. ಸೇ. ಸ. ಸಂಘದ ಉಪಾಧ್ಯಕ್ಷರ ಉಮೇಶ್ ಪೂಜಾರಿ, ಮುಗರೋಡಿ ಕನ್ಸ್ ಸ್ಟ್ರಕ್ಷನ್ ನವರಿಗೆ ತಿಳಿಸಿ ಸ್ಥಳೀಯರ ಸಹಕಾರದಿಂದ ವೃಕ್ಷವನ್ನು ಕಡಿದುರುಳಿಸಿ ಸಂಭಾವ್ಯ ದುರಂತವನ್ನು ತಪ್ಪಿಸಿದರು.