Sunday, January 19, 2025
ಜಿಲ್ಲೆದಕ್ಷಿಣ ಕನ್ನಡಸುದ್ದಿ

ತುಡರ್ ಸೇವಾ ಟ್ರಸ್ಟ್(ರಿ.) ಬಂಟ್ವಾಳ ವತಿಯಿಂದ ಸಹಾಯಧನ ವಿತರಣೆ – ಕಹಳೆ ನ್ಯೂಸ್

ಬಂಟ್ವಾಳ : ತುಡರ್ ಸೇವಾ ಟ್ರಸ್ಟ್(ರಿ.) ಬಂಟ್ವಾಳ ವತಿಯಿಂದ 37,38,39,40 ನೇ ಸೇವಾ ಯೋಜನೆಯ ಫಲಾನುಭವಿಗಳಿಗೆ ಸಹಾಯಧನವನ್ನು ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿತರಣೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

37 ನೇ ಸೇವಾ ಯೋಜನೆ ಮಂಗಳೂರು ತಾಲೂಕಿನ ಬಿಜೈ ಸಮೀಪದ ರೋಡ್ ಕಂಪೌಂಡ್ ನಿವಾಸಿ ಮ್ಯಾಕ್ಸಿಮ್ ಡಿಸೋಜಾ ಅವರ ಬೆನ್ನುಮೂಳೆ ಕ್ಯಾನ್ಸರ್ ಚಿಕಿತ್ಸೆಗೆ ನಮ್ಮ ಸಂಸ್ಥೆಯ ವತಿಯಿಂದ 10,000₹ ನ್ನು ಜೂನ್ 28 ರಂದು ಸೋಮವಾರ ದಂದು ಸದಸ್ಯರ ಸಮ್ಮುಖದಲ್ಲಿ ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

38ನೇ ಸೇವಾ ಯೋಜನೆಯ ಬಂಟ್ವಾಳ ತಾಲೂಕಿನ ಬೆಂಜನಪದವು ನಿವಾಸಿ ಸಂತೋಷ್ ಮತ್ತು ಜ್ಯೋತಿ ರವರ ಮಗಳು ಮೇಧಾ ಎಂಬ ಮಗುವಿಗೆ ಹೃಧಯ ಸಂಬಂದಿ ಕಾಯಿಲೆಯ ಚಿಕಿತ್ಸೆಗೆ ನಮ್ಮ ಸಂಸ್ಥೆಯ ವತಿಯಿಂದ 15,000₹ ನ್ನು ಜೂನ್ 28 ರಂದು ಸೋಮವಾರ ದಂದು ಸದಸ್ಯರ ಸಮ್ಮುಖದಲ್ಲಿ ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು

39ನೇ ಸೇವಾ ಯೋಜನೆಯ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಕುಚ್ಚಿಗುಡ್ಡೆ ನಿವಾಸಿ ಕಿರಣ್ ಅವರ ಕಿಡ್ನಿ ವೈಫಲ್ಯದ ಸಮಸ್ಯೆಯ ಚಿಕಿತ್ಸೆಗೆ ನಮ್ಮ ಸಂಸ್ಥೆಯ ವತಿಯಿಂದ 15,000₹ ನ್ನು ಜುನ್ 28 ರಂದು ಸೋಮವಾರ ದಂದು ಸದಸ್ಯರ ಸಮ್ಮುಖದಲ್ಲಿ ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು.

40ನೇ ಸೇವಾ ಯೋಜನೆಯ ಬಂಟ್ವಾಳ ತಾಲೂಕಿನ ವಾಮದಪದವು ಅಜ್ಜಿಬೆಟ್ಟು ನಿವಾಸಿ ತಿಲೇಶ್ ಅವರಿಗೆ ಅಪಘಾತ ದಲ್ಲಿ ಕಣ್ಣಿಗೆ ತೀವ್ರವಾದ ಗಾಯದಿಂದ ಅವರ ಕಣ್ಣಿನ ಚಿಕಿತ್ಸೆಗೆ ನಮ್ಮ ಸಂಸ್ಥೆಯ ವತಿಯಿಂದ 10,000₹ ನ್ನು ಜೂನ್ 28 ರಂದು ಸೋಮವಾರ ದಂದು ನಮ್ಮ ಸದಸ್ಯರ ಸಮ್ಮುಖದಲ್ಲಿ ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು.