Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಮಂಗಳೂರಿನ ಲಾಡ್ಜ್ ಸೆಕ್ಸ್‌ ಜಿಹಾದ್ ಪ್ರಕರಣ : ದೋಸ್ತಿ, ಪ್ರೀತಿ, ಕಾಮದಾಟ, ಬ್ಲಾಕ್ ಮೇಲ್ – ಸಿಡಿದೆದ್ದ ಹಿಂದೂ ಜಾಗರಣಾ ವೇದಿಕೆ..!, ಕಾರ್ಯಾಚರಣೆ – ಜಿಹಾದ್ ಬಲೆಯಲ್ಲಿ ಅಪ್ರಾಪ್ತೆ, ಪ್ರಕರಣ ಭೇದಿಸಿದ ಪೋಲೀಸರು – ಕಹಳೆ ನ್ಯೂಸ್

ಮಂಗಳೂರು : ನಗರದ ಲಾಡ್ಜ್ ನಲ್ಲಿ ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಪತ್ತೆಯಾದ ಯುವತಿಯರಲ್ಲಿ ಒಬ್ಬಾಕೆ ಅಪ್ರಾಪ್ತ ವಿದ್ಯಾರ್ಥಿನಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದು, ಪೋಕ್ಕೋ ಪ್ರಕರಣ ದಾಖಲಿಸಿದ್ದಾರೆ.

ಕುದ್ರೋಳಿಯ ಶೇಖ್ ಮುಹಮ್ಮದ್ ಮತ್ತು ಬೋಳಾರದ
ಮುಹಮ್ಮದ್ ರಹೀಂ ಬಂಧಿತ ಆರೋಪಿಗಳು. ಇವರು ನಗರದ ಲಾಡ್ಸ್‌ವೊಂದರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಇನ್ನೊಬ್ಬ ಯುವತಿಯ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪ್ರಾಪ್ತ ಬಾಲಕಿ ಹೊರಜಿಲ್ಲೆಯ ವಿದ್ಯಾರ್ಥಿನಿ ಮಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮತ್ತೊಬ್ಬ ಯುವತಿ
ಸುರತ್ಕಲ್ ನವಳು ಎನ್ನಲಾಗಿದೆ. ಕಳೆದ ಭಾನುವಾರ ಅನ್ಯಕೋಮಿನ ಯುವಕರ ಜೊತೆ ಲಾಡ್ಜ್ ನಲ್ಲಿ ವಾಸ್ತವ್ಯ ಇರುವ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮಾಹಿತಿ ನೀಡಿದ್ದು, ಅದರಂತೆ
ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಅಲ್ಲದೇ ಲಾಡ್‌ನವರಿಗೆ ಅನುಮಾನ ಬಾರದಂತೆ ಬೇರೆ ಬೇರೆ ರೂಮ್ ಬುಕ್ ಮಾಡಿದ್ದರು.
ಆಡಿ ಕಾರ್ ನಲ್ಲಿ ಡಾಕ್ಟರ್ ಪಾಸ್ ಬಳಸಿ ಈ ಇಬ್ಬರನ್ನು ಲಾಡ್ಸ್ ಗೆ ಕರೆದುಕೊಂಡು ಬರಲಾಗಿತ್ತು. ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮಹಿಳಾ ಪೊಲೀಸರು ರಕ್ಷಿಸಿ ಬಾಲಮಂದಿರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳ ವಿರುದ್ಧ ಪೋಕ್ಕೂ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಲಾಡ್ಸ್ನಲ್ಲಿ ಉಳಿದುಕೊಂಡ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿಯಲ್ಲೂ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಗಮನಾರ್ಹ :

ಪ್ರಕರಣದಲ್ಲಿ ಸಿಕ್ಕಿಬಿದ್ದ ಯುವಕರು ಇದೇ ತರಹದ ಅನೇಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಯುವತಿಯ ಜೊತೆ ಇರುವ ಖಾಸಗೀ ವಿಡಿಯೋಗಳು ಅವರ ಮೊಬೈಲ್ ನಲ್ಲಿ ಸಿಕ್ಕಿದ್ದು, ಮತ್ತು ಆ ವಿಡಿಯೋ ಗಳನ್ನು ಮುಂದಿಟ್ಟು, ಯುವತಿಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು, ಎಂಬ ಸ್ಪೋಟಕ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಲಿಸ್ ತನಿಖೆ ಮುಂದುವರಿದರೆ, ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರಬಹುದು.

ಹಿಂದೂ ಜಾಗರಣಾ ವೇದಿಕೆ ಕಾರ್ಯಾಚರಣೆ :

ಇನ್ನು ಈ ಪ್ರಕರಣ ಭೇದಿಸುವಲ್ಲಿ ಹಿಂದೂ ಜಾಗರಣಾ ವೇದಿಕೆಯ ಪಾಲು ಬಹುದೊಡ್ಡದು, ಕಳೆದ ಕೆಲ ದಿನಗಳಿಂದ ಅನುಮಾನದ ಆದಾರದಲ್ಲಿ ಈ ಪುಂಡರ ಹಿಂದೆ ಬಿದ್ದಿದ್ದ ಸಂಘಟನೆ ಅವರ ಚಲನ ವಲನದ ಮೇಲೆ ನಿಘಾಯಿಟ್ಟಿದ್ದರಿಂದ ಪ್ರಕರಣವನ್ನು ಭೇದಿಸುವಲ್ಲಿ ಪೋಲೀಸರಿಗೆ ಸಹಕಾರಿಯಾಗಿದೆ. ಘಟನೆ ಕುರಿತು ಆಕ್ರೋಶ ಹೊರಹಾಕಿದ ಜಾಗರಣಾ ವೇದಿಕೆ ಸಮಗ್ರ ತನಿಖೆ ನಡೆಸುವಂತೆ ಆಗ್ತಹಿಸಿದೆ.

ಒಟ್ಟಿನಲ್ಲಿ ಕರಾವಳಿಯಲ್ಲಿ ದಿನೇ ದಿನೇ ಲವ್ ಜಿಹಾದ್, ಸೆಕ್ಸ್ ಜಿಹಾದ್ ನಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಜಿಹಾದಿಗಳು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಇವರ ಅಟ್ಟಹಾಸಕ್ಕೆ ಪೋಲೀಸ್ ಇಲಾಖೆ ಲಾಗಾಮು ಹಾಕಬೇಕಾಗಿದೆ.