Thursday, October 3, 2024
ಸುದ್ದಿ

ಪೂಜ್ಯನೀಯ ಕುದ್ಮುಲ್ ರಂಗರಾಯರ 162ನೇ ಜನ್ಮ ದಿನ -ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲ ಎಸ್.ಸಿ ಮೋರ್ಚಾದಿಂದ ಆಚರಣೆ – ಕಹಳೆ ನ್ಯೂಸ್

ಮಂಗಳೂರು : ದಲಿತ್ತೋದ್ಧಾರಕರು, ಪೂಜ್ಯನೀಯ ಕುದ್ಮುಲ್ ರಂಗರಾಯರ 162ನೇ ಜನ್ಮ ದಿನಾಚರಣೆಯು ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲ ಎಸ್.ಸಿ ಮೋರ್ಚಾ ವತಿಯಿಂದ ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಹಾಗೂ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ ಹಾಗೂ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಇವರು ರಂಗರಾಯರು ಸಮಾಧಿಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು.

ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈಗಾಗಲೇ ರಂಗರಾಯರ ಸ್ಮಾರಕವನ್ನು ಪ್ರವಾಸ್ಯೋದ್ಯಮ ಕೇಂದ್ರವಾಗಿ ಆಭಿವೃಧ್ಧಿಪಡಿಸಲು 3ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಕುದ್ಮುಲ್ ರಂಗರಾಯರ ಜೀವನವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಿದೆ ಎಂದು ಹೇಳಿದರು.

ಕುದ್ಮುಲ್ ರಂಗರಾವ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಬಿ.ಆರ್. ಹೃದಯ್ ನಾಥ್, ಉಪಾಧ್ಯಕ್ಷರಾದ ಶ್ರೀ ಶ್ಯಾಮ್ ಕರ್ಕೇರಾ, , ನಿವೃತ್ತ ಸಾರಿಗೆ ಅಧಿಕಾರಿ ಕುದ್ಮುಲ್ ರಂಗರಾವ್ ರಾಷ್ಟ್ರೀಯ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ದಿ ಅಧ್ಯಕ್ಷರಾದ ಶ್ರೀ ಕೇಶವ ಧರಣಿ, ಕಾರ್ಪೊರೇಟರ್ ಗಳಾದ ಶ್ರೀ ಶೈಲೇಶ್ ಶೆಟ್ಟಿ, ಭರತ್ ಎಸ್, ಮನೋಜ್ ಕೋಡಿಕಲ್,ಬಿ.ಜೆ.ಪಿ. ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಶ್ರೀ ವಿನಯ ನೇತ್ರ ದಡ್ಡಲ್ ಕಾಡ್, ಬಿ.ಜೆ.ಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶ್ರೀಮತಿ ಆಶಾ ಡಿ’ಸಿಲ್ವ, ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೆ. ,‌ ಕಾರ್ಯದರ್ಶಿ ಲಲ್ಲೇಶ್ ಕುಮಾರ್, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಜ್ವಲ್ ಚಿಲಿಂಬಿ , ಶ್ರೀ ನಾಗೇಶ್ ಕೊಡಕ್ಕಲ್ , ಉಪಾಧ್ಯಕ್ಷರುಗಳಾದ ಶ್ರೀ ದಯಾನಂದ ಸನ್ಯಾಸಿಗುಡ್ಡೆ , ಶ್ರೀ ದಿನೇಶ್ ನಂತೂರು , ಶ್ರೀ ಸಂದೀಪ್ ಬೋಳೂರು , ಕಾರ್ಯದರ್ಶಿ ಶ್ರೀಮತಿ ಗೀತಾ ಭವಾನಿ ಶಂಕರ್ ಸುಂಕದ ಕಟ್ಟೆ , ಸದಸ್ಯರು ಶ್ರೀ ರವಿ ಕಾಪಿಕಾಡ್ , ಶ್ರೀ ಗುರು ಪ್ರಸಾದ್ ಮೇಲಿನಮೊಗರು , ಶಕ್ತಿ ಕೇಂದ್ರ ಪ್ರಮುಖ್ ಪುಷ್ಪರಾಜ್ ಶೆಟ್ಟಿ ಮತ್ತು ಪ್ರಮೋದ್ ಕೊಟ್ಟಾರಿ ಉಪಸ್ಥಿತರಿದ್ದರು.

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ, ಬಿ. ಜೆ.ಪಿ. ದಕ್ಷಿಣ ಮಂಡಲ ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಶ್ರೀ ರಘುವೀರ್ ಬಾಬುಗುಡ್ಡ ಸ್ವಾಗತಿಸಿದರು.