Thursday, October 3, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ತಾಲೂಕಿಗೆ ಇಬ್ಬರು ಖಡಕ್ ಪಿ.ಐಗಳ ನೇಮಕ – ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಟಿ.ಡಿ.ನಾಗರಾಜ್, ವಿಟ್ಲ ಪೋಲೀಸ್ ಠಾಣೆಗೆ ನಾಗರಾಜ್ ಎಚ್.ಇ ನೇಮಕ – ಕಹಳೆ ನ್ಯೂಸ್

ಬಂಟ್ವಾಳ:  ಮೇಲ್ದರ್ಜೆಗೊಂಡ ಬಂಟ್ವಾಳ ವೃತ್ತದಲ್ಲಿದ್ದ ಬಂಟ್ವಾಳ ಗ್ರಾಮಾಂತರ ಮತ್ತು ವಿಟ್ಲ ಪೋಲೀಸ್ ಠಾಣೆಗೆ ಪೋಲೀಸ್ ಇನ್ಸ್ ಪೆಕ್ಟರ್ (ಪಿ.ಐ) ಗಳಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಈ ಮೊದಲು ಬಂಟ್ವಾಳ ವೃತ್ತ ನಿರೀಕ್ಷಕ ರಾಗಿದ್ದ ಟಿ.ಡಿ.ನಾಗರಾಜ್ ಅವರನ್ನು ಮರು ನೇಮಕ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ಪೋಲೀಸ್ ಠಾಣೆಗೆ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ನಾಗರಾಜ್ ಎಚ್ .ಇ.ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

ಜಾಹೀರಾತು
ಜಾಹೀರಾತು


ಇವರು ಈ ಹಿಂದೆ ವಿಟ್ಲ, ಪುತ್ತೂರು, ಕಡಬ ಬಂಟ್ವಾಳ ಗ್ರಾಮಾಂತರ ಹಾಗೂ ವೇಣೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಇಬ್ಬರು ಖಡಕ್ ಆಫೀಸರ್ ಗಳು ಬಂಟ್ವಾಳ ತಾಲೂಕಿಗೆ ನೇಮಗೊಂಡಿದ್ದಾರೆ.

ಬಂಟ್ವಾಳ ವೃತ್ತ ಇನ್ನಿಲ್ಲ

1956 ನಿಂದ ಬಂಟ್ವಾಳ ಸರ್ಕಲ್ ಕಾರ್ಯರಂಭ ಆಗಿತ್ತು. ಘಟಾನುಘಟಿಗಳು ಇಲ್ಲಿ ವೃತ್ತ ನಿರೀಕ್ಷಕ ರಾಗಿ ಸೇವೆ ಮಾಡಿದ್ದಾರೆ.
2021 ವರೆಗೆ ಬಂಟ್ವಾಳ ವೃತ್ತವಾಗಿ ಉಳಿದಿತ್ತು.

ಬಂಟ್ವಾಳ ವೃತ್ತ ಕ್ಕೆ ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ, ಮೆಲ್ಕಾರ್ ಟ್ರಾಫಿಕ್ ಹಾಗೂ ವಿಟ್ಲ ಪೋಲೀಸ್ ಠಾಣೆಗಳು ಒಳಗೊಂಡಿತ್ತು.
ಸರಕಾರದ ಬದಲಾದ ಆದೇಶ ದಂತೆ ಮೂರು ಠಾಣೆಗಳು ಮೇಲ್ದರ್ಜೆಗೊಂಡಿದೆ. ಪಿ.ಐ.ಠಾಣೆಗಳಾಗಿ ಮೇಲ್ದರ್ಜೆಗೊಂಡ ಮೂರು ಠಾಣೆಗಳಿಗೆ ಪೋಲೀಸ್ ಇನ್ಸ್ ಪೆಕ್ಟರ್ ಗಳನ್ನು ಸರಕಾರ ಆದೇಶ ಮಾಡಿದೆ.

ಇನ್ಮುಂದೆ ಬಂಟ್ವಾಳ ತಾಲೂಕಿನ ಠಾಣೆಗಳಲ್ಲಿ “ರಾಜ”ಗಳದ್ದೇ ದರ್ಬಾರ್ ?
ಬಂಟ್ವಾಳ ತಾಲ್ಲೂಕಿನ ಮೂರು ಠಾಣೆಗಳಲ್ಲಿ ಇನ್ಮುಂದೆ ತ್ರಿಮೂರ್ತಿ ರಾಜರುಗಳದ್ದೇ ದರ್ಬಾರ್ ನಡೆಯಲಿದೆ. ಮೇಲ್ದರ್ಜೆಗೊಂಡ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್, ಬಂಟ್ವಾಳ ಗ್ರಾಮಾಂತರ ಟಿ.ಡಿ.ನಾಗರಾಜ್, ವಿಟ್ಲಕ್ಕೆ ನಾಗರಾಜ್ ಎಚ್.ಇ. ಹೀಗೆ ಮೂರು ರಾಜರುಗಳು ಬಂಟ್ವಾಳದಲ್ಲಿ ಸದ್ಯಕ್ಕೆ ನೆಲಯಾಗಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಇವರ ಜೊತೆ ಮೇಲ್ದರ್ಜೆಗೊಂಡ ಠಾಣೆಗಳಲ್ಲಿ ಪೋಲಿಸ್ ಶಕ್ತಿಯನ್ನು ಸರಕಾರ ಹೆಚ್ಚು ಮಾಡಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಅವರು ವರ್ಗಾವಣೆ ಗೊಂಡ ಬಳಿಕ ತೆರವಾಗಿದ್ದ ಬೆಳ್ತಂಗಡಿ ವೃತ್ತ ನಿರೀಕ್ಷರಾಗಿ ಶಿವಕುಮಾರ್ ಬಿ.ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.