ನಾವೂರು ಪಂಚಾಯತ್ ವ್ಯಾಪ್ತಿಯ ‘ಸಿಂತಾನಿಕಟ್ಟೆ’ ಹೆಸರನ್ನು ಬದಲಾಯಿಸಲು ಪ್ರಯತ್ನ – “ಸಿಂತಾನಿಕಟ್ಟೆ” ಹೆಸರು ಉಳಿವಿಗಾಗಿ ನಾಮಫಲಕ ಆಳವಡಿಸಲು ಮನವಿ – ಕಹಳೆ ನ್ಯೂಸ್
ಬಂಟ್ವಾಳ : ನಾವೂರು ಪಂಚಾಯತ್ ವ್ಯಾಪ್ತಿಯ ಸಿಂತಾನಿಕಟ್ಟೆ ಹೆಸರನ ಬದಲಾಯಿಸಲು ಅನೇಕರು ಪ್ರಯತ್ನಿಸುತ್ತಿದ್ದು, ಇದೀಗ ಹೆಸರನ್ನ ಬದಲಾಯಿಸದಂತೆ ಊರಿನ ಜನತೆ ಮನವಿ ಮಾಡಿದ್ದಾರೆ. ಹಿಂದು ಜಾಗರಣ ವೇದಿಕೆ ಸರಪಾಡಿ ವಲಯದ ವತಿಯಿಂದ ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರಿಗೆ ಸಿಂತಾನಿಕಟ್ಟೆಯಲ್ಲಿ ನಾಮ ಫಲಕ ಆಳವಡಿಸುವ ಬಗ್ಗೆ ಮನವಿ ಮಾಡಿಕೊಂಡಿದೆ.
ಸುಮಾರು ನೂರಾರು ವರುಷಗಳಿಂದ ನಾವೂರು ಪಂಚಾಯತ್ ವ್ಯಾಪ್ತಿಯ ಸಿಂತಾನಿಕಟ್ಟೆ ಹೆಸರಿನಿಂದ ಕರೆಯಲಾಗುತಿತ್ತು, ಆದರೆ ಸದ್ಯ ಈ ಪ್ರದೇಶವನ್ನು ಬೇರೆ ಬೇರೆ ಕಾರಣಗಳಿಗೊಸ್ಕರ ಹೊಸ ಹೊಸ ಹೆಸರನ್ನಿಡಲು ಕಸರತ್ತುಗಳು ನಡೆಯುತ್ತಿದೆ. ಆದರಿಂದ ಹಿರಿಯರ ಕಾಲದಿಂದಲೂ ಕರೆದುಕೊಂಡು ಬಂದಿರುವ ಊರಿನ ಹೆಸರನ್ನು ಬದಲಾಯಿಸುದನ್ನು ಹಿಂದೂ ಜಾಗರಣಾ ವೇದಿಕೆ ಒಪ್ಪುವುದಿಲ್ಲ, ಆದರಿಂದ ಸದ್ರಿ ಪರಿಸರದಲ್ಲಿ ನಮ್ಮ ಊರಿನ ಹೆಸರಾದ “ಸಿಂತಾನಿಕಟ್ಟೆ ” ಎಂಬುದನ್ನು ಉಳಿಸಲು ಈ ಪ್ರದೇಶದ ಊರಿನ ಎಲ್ಲಾ ನಾಗರೀಕರು ಸೇರಿ “ಸಿಂತಾನಿಕಟ್ಟೆ” ಎಂಬ ನಾಮಫಲಕವನ್ನು ಆಳವಡಿಸಲು ಅನುಮತಿಯನ್ನು ಕೋರಿ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯ ಜಾಗರಣ ಪ್ರಮೂಖರಾದ ರಾಜೇಶ ಬೋಲ್ಲುಕಲ್ಲು, ವಲಯ ಅಧ್ಯಕ್ಷರಾದ ನಾಗೇಶ, ರಕ್ಷಿತ್ ಅಲ್ಲೀಪಾದೇ,ರವಿ ಸಿಂತಾನಿಕಟ್ಟೇ, ಸುರೇಶ ಸಿಂತಾನಿ ಕಟ್ಟೇ, ತೇಜಾಕ್ಷ ಸಿಂತಾನಿಕಟ್ಟೆ ಉಪಸ್ಥಿತರಿದ್ದರು.