ಮಾಣಿ ಶಂಭುಗ ನಿವಾಸಿ ಗೋಪಾಲ ಮೂಲ್ಯರ ಗದ್ದೆಯಲ್ಲಿ ಭತ್ತದ ಕೃಷಿಯ ಸೊಬಗು – ನೇಗಿಲ ಹಿಡಿದ ಹೊಲದೊತ್ತ ಸಾಗಿದ ಸೀತಾರಾಮ ಶೆಟ್ಟಿ – ಕಹಳೆ ನ್ಯೂಸ್
ಮಾಣಿ : ಭತ್ತದ ಕೃಷಿ ದ.ಕ.ಜಿಲ್ಲೆಯ ಸಂಸ್ಕೃತಿಯನ್ನು ಉಳಿಸಿದೆ. ಹಾಗಾಗಿ ಕೃಷಿ ಉಳಿಯಬೇಕೆಂಬ ಆಲೋಚನೆ ಇಂದಿನ ಯುವ ಜನತೆಯಲ್ಲಿ ಇದೆಯಾದರೂ ಕೃಷಿ ಚಟುವಟಿಕೆಗೆ ಅನುಗುಣವಾಗಿ ಪೂರಕವಾದ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಕಷ್ಟವಾಗುತ್ತದೆ ಎಂಬ ಕೂಗುಗಳು ಕೇಳುತ್ತಿದೆ. ಯಾಂತ್ರಿಕ ಕೃಷಿಯಿಂದ ಮಾತ್ರ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಕೃಷಿ ಉಳಿದಿದೆ. ಪ್ರಸ್ತುತ ದಿನಗಳಲ್ಲಿ ಮಾನವ ಬಳಕೆ ಮಾಡಿ ಕೃಷಿ ಮಾಡುವುದು ಕಷ್ಟದ ಕೆಲಸ. ಆದರೂ ಮಾಣಿ ಗ್ರಾಮದಲ್ಲಿ ಮಾನವ ಬಳಕೆ ಮಾಡಿ ಕೃಷಿ ಮಾಡಿ ಲಾಭವನ್ನು ಪಡೆಯುವ ಪ್ರಯತ್ನ ಕಳೆದ ಕೆಲ ವು ವರ್ಷಗಳಿಂದ ನಡೆಯುತ್ತಿರುವುದು ಹೆಚ್ಚಿನ ಸಂತಸದ ವಿಚಾರ.
ಮಾಣಿ ಗ್ರಾಮದ ಶಂಭುಗ ಪರಿಸರ ಹೇರಳವಾಗಿ ಭತ್ತ ಬೆಳೆಯುವ ಜಾಗ.ಇಂದು ಭತ್ತದ ಕೃಷಿ ಎಂದರೆ ಅದೊಂದು ನಷ್ಟ ವ್ಯವಹಾರ ಎಂದೇ ಭತ್ತದ ಗದ್ದೆಗಳು ಹೆಚ್ಚಿನ ಕಡೆ ಹಡೀಲು ಬಿಟ್ಟು ಬಿಡುವುದು ಸಾಮಾನ್ಯವಾಗಿದೆ.
ಮಾಣಿ ಶಂಭುಗ ನಿವಾಸಿ ಗೋಪಾಲ ಮೂಲ್ಯರ ಗದ್ದೆಯಲ್ಲಿ , ಶಂಭುಗ ನಿವಾಸಿ ಭತ್ತದ ಕೃಷಿಯ ಅನುಭವೀ ಸೀತಾರಾಮ ಶೆಟ್ಟಿ ಯವರ ಸೂಕ್ತ ಮಾರ್ಗದರ್ಶನದಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.ಗೋಪಾಲ ಮೂಲ್ಯರು ವೃತ್ತಿಯಲ್ಲಿ ಕಟ್ಟಡ ಗುತ್ತಿಗೆದಾರರು ಆದರೂ ಭತ್ತದ ಕೃಷಿಯನ್ನು ಆಸಕ್ತಿಯಿಂದ ಮಾಡುತ್ತಿದ್ದಾರೆ. ಶಂಭುಗ ಸೀತಾರಾಮ ಶೆಟ್ಟಿಯವರು, ಕೃಷಿ ,ಮತ್ತು ಭತ್ತದ ಕೃಷಿ ವಿಚಾರದಲ್ಲಿ ಮತ್ತು ಕಂಬಳಕೋರಿ ಸಂಪ್ರದಾಯದ ಬಗ್ಗೆ ಹೆಚ್ಚು ತಿಳಿದವರಾಗಿದ್ದಾರೆ..ಇವರ ವಿಶೇಷತೆಯೆಂದರೆ ಭತ್ತದ ಗದ್ದೆಯ ಕೃಷಿ ಕಾರ್ಯಗಳಲ್ಲಿ ತೊಡಗಿಸಲು ಅನುಭವ ಕೊರತೆ ಇದ್ದವರಿಗೆ ಸೂಕ್ತ ತರಬೇತಿ ನೀಡುವ ಕ್ರಿಯಾಶೀಲ ವ್ಯಕ್ತಿತ್ವ ಇವರದಾಗಿದೆ. ಯುವ ಕೃಷಿಕರಿಗೆ ಸೂಕ್ತ ಸಲಹೆ ನೀಡುವ ಸೀತಾರಾಮ ಶೆಟ್ಟಿಯವರಿಗೆ ಭತ್ತದ ಕೃಷಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವರು ಮೂರು ಗ್ರಾಮದ ಅರಸು ಶ್ರೀ ಗುಡ್ಡೆ ಚಾಮುಂಡಿ ದೈವದ ಪಾತ್ರಿಯಾಗಿಯು ಮಾಣಿಯಲ್ಲಿ ಪರಿಚಿತರಾಗಿದ್ದಾರೆ..ಸೀತಾರಾಮ ಶೆಟ್ಟಿ ಯವರು ಕಳೆದ ಕೆಲವು ವರ್ಷಗಳಿಂದ ಹಡಿಲು ಬಿದ್ದ ಈ ಗ್ರಾಮದ ಗದ್ದೆಗಳನ್ನು ಕೃಷಿ ಮಾಡಲು ಪ್ರೇರೇಪಣೆ ನೀಡುವುದರ ಜೊತೆಗೆ ಗದ್ದೆಗಳನ್ನು ಗೇಣಿ ರೂಪದಲ್ಲಿ ಪಡೆದು ಕೃಷಿ ಮಾಡುತ್ತಿದ್ದಾರೆ.
ಇವರ ಕೃಷಿಯಲ್ಲಿನ ಆಸಕ್ತಿ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ವಾಗಲಿದೆ.ಇಂತಹ ಹಿರಿಯ ಕೃಷಿಕರ ಮಾರ್ಗದರ್ಶನ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ,