Recent Posts

Monday, January 20, 2025
ಬೆಂಗಳೂರುರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಕೇಂದ್ರ ಸಚಿವ ಸದಾನಂದಗೌಡರಿಗೂ ಶುರುವಾಯ್ತಾ ಸಿಡಿ ಭಯ.? – ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರಿಗೂ ಸಿಡಿ ಭಯ ಶುರುವಾದಂತಿದೆ. ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆಯನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆನ್ನಲಾಗಿದೆ.

ಕೆಲವು ಪತ್ರಿಕೆ ಮತ್ತು ವಾಹಿನಿಗಳಲ್ಲಿ ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಬಹುದಾಗಿದೆ ಕ್ಯಾಬಿನೆಟ್ ಪುನಾರಚನೆ ಸಂದರ್ಭದಲ್ಲಿ ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲು ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಒಬಾಮಾ ಮತ್ತು ಕ್ವೀನ್ ಎಲಿಜಬೆತ್ ಅವರ ನಕಲಿ ವಿಡಿಯೋ ಮಾಡಿ ಪ್ರಸಾರ ಮಾಡಲಾಗಿತ್ತು. ಇಂಥ ವಿಡಿಯೋ ಪ್ರಸಾರವಾದರೆ ಚಾರಿತ್ರ್ಯವಧೆಯಾಗಲಿದೆ. ಘನತೆಗೆ ಧಕ್ಕೆ ಉಂಟಾಗಲಿದೆ ಎಂದು ಡಿ.ವಿ. ಸದಾನಂದಗೌಡ ಅರ್ಜಿ ಸಲ್ಲಿಸಿದ್ದು, ಅಂತಹ ಮಾನಹಾನಿಕರ ವರದಿಗೆ ತಡೆ ನೀಡಬೇಕೆಂದು ಕೋರಿದ್ದಾರೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿರ್ಬಂಧ ಹೇರಲು ಕೋರಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.