Wednesday, October 2, 2024
ಬೆಂಗಳೂರುರಾಜ್ಯಸುದ್ದಿ

ದಾವಣಗೆರೆಯಲ್ಲಿ ಕೊರೊನಾ ರೂಪಾಂತರಿ ವೈರಸ್ ಮಿಸ್ಸಿಗೆ 5 ವರ್ಷದ ಮಗು ಬಲಿ – ಕಹಳೆ ನ್ಯೂಸ್

ದಾವಣಗೆರೆ: ಕೊರೊನಾ ಸೋಂಕಿನ ರೂಪಾಂತರಿ ವೈರಸ್ ಮಿಸ್ಸಿಯಿಂದ 5 ವರ್ಷದ ಮಗು ಮೃತಪಟ್ಟಿದೆ.

ಕೊರೊನಾ ಈಗಾಗಲೇ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಆದರೆ ಇದೀಗ ಮಹಾಮಾರಿ ಕೊರೊನಾ ಸೋಂಕಿನ ರೂಪಾಂತರಿ ವೈರಸ್ ಮಿಸ್ಸಿ ಮಕ್ಕಳನ್ನು ಕಾಡುತ್ತಿದ್ದು, ಇಡೀ ಮಕ್ಕಳ ಕುಲವನ್ನೇ ಆತಂಕಕ್ಕೆ ದೂಡಿದೆ. ರಾಜ್ಯಾದ್ಯಂತ ಸಾಕಷ್ಟು ಮಕ್ಕಳಿಗೆ ಮಿಸ್ಸಿ ಎಂಬ ರೂಪಾಂತರಿ ವೈರಾಣು ಕಾಣಿಸಿಕೊಂಡಿದ್ದು, ಚಿಕಿತ್ಸೆ ಕೂಡ ಆಯಾಯ ಜಿಲ್ಲಾಸ್ಪತ್ರೆಯಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಆದರೆ ಮಿಸ್ಸಿ ಎಂಬ ಮಹಾಮಾರಿ ಕ್ರೌರ್ಯಕ್ಕೆ ದಾವಣಗೆರೆಯಲ್ಲಿ ಮೊದಲ ಮಗು ಬಲಿಯಾಗಿದೆ. ಎಸ್.ಎಸ್.ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 5 ವರ್ಷದ ಹೆಣ್ಣು ಮಗು ಕೊನೆಯುಸಿರೆಳೆದಿದ್ದಾಳೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.

ಸೋಂಕಿನಿಂದ ಬಳಲುತ್ತಿದ್ದ ಮಗುವಿನಲ್ಲಿ ಮಿಸ್ಸಿ ಕಂಡು ಬಂದಿದ್ದು, ಶಿರಾದಿಂದ ಹಿರಿಯೂರು ಹಾಗೂ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು, ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದಿಂದ ರೆಫರ್ ಆಗಿ ದಾವಣಗೆರೆ ಬಂದಿದ್ದು, ಮಿಸ್ಸಿ ಕಾಯಿಲೆ ಇರುವ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಬೆಳಗಿನ ಜಾವ 3 ಗಂಟೆಗೆ ಮಗು ಸಾವನ್ನಪ್ಪಿದೆ. ಕಳೆದ ವರ್ಷದಿಂದ ಹತ್ತು ಮಿಸ್ಸಿ ಪ್ರಕರಣಗಳು ದಾವಣಗೆರೆಯಲ್ಲಿ ದಾಖಲಾಗಿದ್ದು, 2 ಮಿಸ್ಸಿ ಅಕ್ಟಿವ್ ಕೇಸ್ ಗಳು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.