Recent Posts

Monday, January 20, 2025
ರಾಜ್ಯರಾಷ್ಟ್ರೀಯಸುದ್ದಿ

ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ವಿಜಯಪುರದ ಯೋಧ ಹುತಾತ್ಮ – ಕಹಳೆ ನ್ಯೂಸ್

ವಿಜಯಪುರ : ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧರೊಬ್ಬರು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಜರುಗಿದ ರಕ್ಷಕ ಕಾರ್ಯಾಚರಣೆ ಯಲ್ಲಿ ವೀರಮರಣ ಅಪ್ಪಿದ್ದಾರೆ.

ಹುತಾತ್ಮ ವೀರ ಯೋಧರನ್ನು ಕಾಶಿರಾಯ ಬೊಮ್ಮನಹಳ್ಳಿ (44) ಆರ್.ಆರ್.(ರಜಪೂತ) (ಪೇರೆಂಟ್ ಯುನಿಟ್-38 ಅಸಲ್ಟ್ ಎಂಜಿನಿಯರ್ ರೆಜಿಮೆಂಟ್) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಮ್ಮು ಮತ್ತು ಕಾಶ್ಮೀರ್‌ ರಾಜ್ಯದ ರಕ್ಷಕ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ್ದಾಗಿ ಬೆಳಗಾವಿ ಕೇಂದ್ರದ ಸ್ಟೇಷನ್ ಸ್ಟಾಫ್ ಆಫೀಸರ್ ಮಾಹಿತಿ ನೀಡಿದ್ದಾಗಿ ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹುತಾತ್ಮ ಯೋಧ ಕಾಶಿರಾಯ ಅವರ ಪಾರ್ಥೀವ ಶರೀರ‌ ಜು.3 ರಂದು ಜಮ್ಮು ಮತ್ತು ಕಾಶ್ಮೀರ್‌ ರಾಜ್ಯದಿಂದ ಹೊರಟು, ಬೆಳಗಾವಿ ಸಾಂಬ್ರಾ ಸೇನಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಹುತಾತ್ಮ ಯೋಧರ ಸ್ವಗ್ರಾಮ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಕ್ಕೆ ತಲುಪಲಿದೆ.

ಜಿಲ್ಲೆಗೆ ಹುತಾತ್ಮ ಯೋಧರ ಪಾರ್ಥೀವ ಶರೀರವನ್ನು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಿಸಲು ತಹಶೀಲದಾರ ಬಸವನ ಬಾಗೇವಾಡಿ, ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.