Saturday, November 23, 2024
ಪುತ್ತೂರು

ಪುತ್ತೂರು :- ಕೊರೋನ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಲಿಕಟ್ಟೆ ಇದರ ವೈದ್ಯರು ಹಾಗು ದಾದಿಯರಿಗೆ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗು ಸೇವಾ ಭಾರತಿ ವತಿಯಿಂದ ಗೌರವಾರ್ಪಣೆ-ಕಹಳೆ ನ್ಯೂಸ್

ಪುತ್ತೂರು ತಾಲೂಕಿನಲ್ಲಿ ಕೊರೋನ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಲಿಕಟ್ಟೆ ಇದರ ವೈದ್ಯರು ಹಾಗು ದಾದಿಯರಿಗೆ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗು ಸೇವಾ ಭಾರತಿ ವತಿಯಿಂದ ಶಾಲು ಹೊದೆಸಿ, ಹಣ್ಣಿನ ಗಿಡ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಶನ್ ಸಂದರ್ಭ ತಂಡ ಸ್ಪೂರ್ತಿ ಹಾಗು ಸೇವಾ ಮನೊಭಾವದಿಂದ ಇಲ್ಲಿನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಕೊರೋನ ನಿರ್ಮೂಲನೆಗಾಗಿ ಸರಕಾರಿ ವ್ಯವಸ್ಥೆ ಹಾಗು ಆಸ್ಪತ್ರೆಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಸಾಕ್ಷೀಕರಿಸಿದ್ದಾರೆ ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು.
ಈ ಸಂದರ್ಭ ನಗರ ಸಭಾ ಅಧ್ಯಕ್ಷ ಜೀವಂಧರ ಜೈನ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸಂತೋಷ್ ಬೋನಂತಾಯ,ಜಯಂತ ಕುಂಜೂರುಪಂಜ, ರಂಜಿತ್ ಮಲ್ಲ, ರಾಘವೇಂದ್ರ ಕಲ್ಲೇಗ, ರಾಮ್ ಪ್ರಸಾದ್ ಮಯ್ಯ, ದಿನೇಶ್ ಕುಮಾರ್ ಜೈನ್, ಹರ್ಷಿತ್ ಬಲ್ನಾಡು, ಯೋಗಿತ್ ಬಲ್ನಾಡು, ಚಂದ್ರನಾಥ ಮುಕ್ವೆ, ಧನೇಶ್ ಉರ್ಲಾಂಡಿ‌ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು