Recent Posts

Sunday, January 19, 2025
ರಾಜಕೀಯ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿ.ಎಂ ಪ್ರಚಾರ : ಬೈದು ಕಳುಹಿಸಿದ ಜೆಡಿಎಸ್ ಕಾರ್ಯಕರ್ತ

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಪ್ರಚಾರ ನಡೆಸಿದ್ದಾರೆ. ಈ ಸಂದರ್ಭ  ಪ್ರಚಾರದಲ್ಲಿ‌ ಜೆಡಿಎಸ್ ಕಾರ್ಯಕರ್ತರೊಬ್ಬರು ಸಿಎಂರನ್ನು ಬೈದು ಕಳುಹಿಸಿದ್ದಾರೆ.

ಮೈಸೂರಿನ ಹಳೆಕೆಸರೆ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಕಾರ್ಯಕರ್ತ ಮರಿಸ್ವಾಮಿ ನಡುವೆ ಮಾತಿನ ಜಟಾಪಟಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮರಿಸ್ವಾಮಿ ಸಿದ್ದಲಿಂಗಪುರ ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯರಾಗಿದ್ದಾರೆ. ಇವರನ್ನು ಸಿದ್ದರಾಮಯ್ಯ ಅವರು

ಜಾಹೀರಾತು
ಜಾಹೀರಾತು
ಜಾಹೀರಾತು

ಹೇ ಮರಿಸ್ವಾಮಿ ನೀ ನನ್ನ ಜೊತೆ ಇದ್ದಲ್ಲಯ್ಯ ಬಾ ಎಂದು ಕರೆದಿದ್ದಾರೆ. ನಾನು ಜೆಡಿಎಸ್‌ನಲ್ಲಿದ್ದೇನೆ ಬರೋದಿಲ್ಲ ಎಂದ ಮರಿಸ್ವಾಮಿ ಉತ್ತರಿಸಿದ್ದಾರೆ.

ಆಯ್ತು ನೀ ಬರಬೇಡ ಓಟು ಹಾಕು ಎಂದ ಸಿದ್ದರಾಮಯ್ಯ ಹೇಳಿದಾಗ  ನಾ ಬರೋದಿಲ್ಲ, ಓಟು ಹಾಕೋದಿಲ್ಲ ಎಂದ ಮರಿಸ್ವಾಮಿ ಹೇಳಿದ್ದಾರೆ. ಆಯ್ತು ಬರಬೇಡ ಹೋಗು ಎಂದು ಸಿದ್ದರಾಮಯ್ಯ ಅಂದಾಗ ನೀವು ನಮ್ಮ ಊರಿ‌‌ನಲ್ಲಿ ಇರೋದು, ನೀವೇ ಹೋಗಿ ಎಂದ ಮರಿಸ್ವಾಮಿ ಹೇಳಿದ್ದಾರೆ.

ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿದ ಮಹಸ್ವಾಮಿಗೆ ದೊಡ್ಡ ನಮಸ್ಕಾರ ಎಂದು ಮರಿಸ್ವಾಮಿ ಹೇಳಿದಾಗ,  ಅದು ಆಗ ಕಣಯ್ಯ ಈಗ ನಾನು ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊನೆಗೆ ಹೇ ಅವನು ಯಾವುದಕ್ಕಾದ್ರೂ ಓಟು  ಮಾಡಲಿ ನೀವು ಕಾಂಗ್ರೆಸ್‌ಗೆ ಮಾಡಿ ಎಂದ ಸಿದ್ದರಾಮಯ್ಯ ಹೇಳಿದ್ದು, ಊರ ಜನರ ಮುಂದೆ ಪರಸ್ಪರ ಮಾತಿನ ಚಕಮಕಿ ಸಿಎಂ ಮತ್ತು ಮರಿಸ್ವಾಮಿ ನಡುವೆ ನಡೆದಿದೆ.

ಸಿಎಂ ಮುಂದೆಯೇ ಜಿ.ಟಿ.ದೇವೆಗೌಡರಿಗೆ  ಜೆಡಿಎಸ್ ಕಾರ್ಯಕರ್ತರು ಜೈಕಾರ  ಹಾಕಿದ್ದು, ಇದು ಸಿದ್ದರಾಮಯ್ಯಗೆ, ಭಾರೀ ಮುಜುಗರ ಮೂಡಿಸಿದೆ. ಬಳಿಕ ಪ್ರಚಾರ ಮುಗಿಸಿ ಸಿದ್ದರಾಮಯ್ಯ ವಾಪಸ್ ಆಗಿದ್ದಾರೆ.