Sunday, January 19, 2025
ಕಾಸರಗೋಡುಸುದ್ದಿ

ಕಾಸರಗೋಡು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಬಿದ್ದು ಮೂವರು ಮೀನುಗಾರರು ನಾಪತ್ತೆ – ಕಹಳೆ ನ್ಯೂಸ್

ಕಾಸರಗೋಡು: ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಮೀನುಗಾರರು ನಾಪತ್ತೆಯಾದ ಘಟನೆ ರವಿವಾರ ಮುಂಜಾನೆ 6 ಗಂಟೆ ಸುಮಾರಿಗೆ ನಡೆದಿದೆ.

ದೋಣಿಯಲ್ಲಿ 7 ಮಂದಿ ಮೀನುಗಾರರು ಇದ್ದರೆನ್ನಲಾಗಿದ್ದು. ನಾಲ್ವರು ಈಜಿ ದಡ ಸೇರಿದ್ದಾರೆ. ಕಸಬಾ ಕಡಪ್ಪುರದ ಸಂದೀಪ್ (33), ರತೀಶ್ (30) ಮತ್ತು ಕಾರ್ತಿಕ್ (29) ನಾಪತ್ತೆಯಾದವರು. ರವಿ (40), ಶಿಬಿನ್ (30), ಮನಿಕುಟ್ಟನ್ (35) ಈಜಿ ದಡಸೇರಿದ್ದಾರೆ. ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಪತ್ತೆ ಆದ ಕಾರ್ಮಿಕರು ಸಂದೀಪ್ ಕಾರ್ತಿಕ್ ಹಾಗೂ ರತೀಶ್ ಅವರಿಗಾಗಿ ಹುಡುಕಾಟ ಮುಂದುವರಿದಿದೆ. ದೋಣಿ ಮಗುಚಲು ಕಾರಣ ತಿಳಿದುಬಂದಿಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು