Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಹೈಟೆಕ್ ಹನಿಟ್ರ್ಯಾಪ್‌ ಪ್ರಕರಣ | ನಿನ್ನೆ ಹೆಣ್ಣು ತನೀಶಾ, ಇಂದು ಮತ್ತೆ ಮೂವರು ಆರೋಪಿಗಳ ಹೆಡೆಮುರಿಕಟ್ಟಿದ ಲೇಡಿ ಸಿಂಗಂ, ಡಿವೈಎಸ್ಪಿ ಡಾ.ಗಾನಾ ಪಿ. ಕುಮಾರ್ ಆಂಡ್ ಟೀಂ – ಕಹಳೆ ನ್ಯೂಸ್

ಪುತ್ತೂರು : ಹೈಟೆಕ್ ಹನಿಟ್ರ್ಯಾಪ್‌ಗೊಳಗಾದ ಯುವಕನೊಬ್ಬ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿರುವ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿ, ನಿನ್ನೆ ಒಬ್ಬ ಯುವತಿಯನ್ನು ಪೋಲಿಸರು ಬಂಧಿಸಿದ್ದರು. ಇದೀಗ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಣೂರು ಸನಿಹದ ಸರ್ವೆ ಬಳಿ ಪೊಲೀಸರು ಇಂದು ಬೆಳಗ್ಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭಿಸಿದೆ. ಬಂಧಿತರನ್ನು ಸವಣೂರಿನ ಅಜ‌, ನಸೀರ್ ಎನ್ನಲಾಗಿದ್ದು ಖಚಿತ ಮಾಹಿತಿ ಮೇರೆಗೆ ಸರ್ವೆ ಸೇತುವೆ ಬಳಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ
ಸಂಬಂಧಿಸಿದಂತೆ ಈಗಾಗಲೇ ಯುವತಿಯನ್ನು ಬಂಧಿಸಲಾಗಿದೆ.
ಇಬ್ಬರು ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ. ಇದೇ ವೇಳೆ ಇನ್ನೋರ್ವ ಆರೋಪಿ ಕೂಡ ಪೊಲೀಸ್ ವಶ ಆಗಿರುವ ಮಾಹಿತಿ ಲಭಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳ ಪೈಕಿ 4 ಜನ ಆರೋಪಿಗಳು ಬಂಧಿತರಾಗಿದ್ದಾರೆ ಎಂದು ಪೋಲೀಸ್ ಮೂಲಗಳು ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏನಿದು ಪ್ರಕರಣ..!? ಯಾರು ಅವರು..!? :

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ. ಜಿಲ್ಲೆಯ ಪುತ್ತೂರು ತಾಲೂಕು ನೆಟ್ಟಣಿಗೆ ಮುನ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ (25)ಎಂಬವರು ಹನಿಟ್ರ್ಯಾಪ್‌ಗೆ ಬಲಿಯಾಗಿ ರೂ.30 ಲಕ್ಷ ಕಳೆದುಕೊಂಡಿರುವುದಾಗಿ ಕೆಲದಿನಗಳ‌ ಹಿಂದೆ ಪೊಲೀಸರಿಗೆ ದೂರು ನೀಡಿದವರು.

ಈ ದೂರಿನ ಆನ್ವಯ ತನಿಖೆ ಕೈಗೆತ್ತಿಗೊಂಡ ಉಪವಿಭಾಗದ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದ ಡಿವೈಎಸ್ಪಿ ಡಾ. ಗಾನ ಪಿ.ಕುಮಾರ್ ನೇತೃತ್ವದ ಪೊಲೀಸರು ಪ್ರಕರಣದ
ಆರೋಪಿಗಳ ಪೈಕಿ, ಮೋಸದ ಜಾಲ‌ ಬೀಸಿದ್ದ ಮಹಿಳೆಯನ್ನು ಬಂಧಿಸಿದ್ದು, ಇಂದು ನಾಲ್ವರನ್ನು ಬಂಧಿಸಿದ್ದಾರೆ. ಇನ್ನು ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆ ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಇನ್ನು ಈ ಪ್ರಕರಣ ಹಿನ್ನಲೆಯಲ್ಲಿ ಇವರ ನಿರಂತರ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ..!? ಬಂಧಿತಳಾದ ಯುವತಿಯ ಹಿನ್ನಲೆ ಏನು..!? ಅವಳೂ ಇಂತಹ ಕೃತ್ಯದಲ್ಲಿ ಅನುಭವಸ್ಥೆಯೇ..!? ಎಂಬೆಲ್ಲಾ ದೃಷ್ಟಿಯಿಂದ ತನಿಖೆ ಚುರುಕುಗೊಳ್ಳಲಿದ್ದು, ಸತ್ಯಾಂಶ ಹೊರಬರಬೇಕಾಗಿದ್ದೆ. ಒಟ್ಟಿನಲ್ಲಿ ಬೆಂಗಳೂರು – ಮುಂಬೈ ನಂತಹ ಮಹಾನಗರಗಳಲ್ಲಿ ಇಂತಹ ಘಟನೆಗಳನ್ನು ಈ ಹಿಂದೆ ಕೇಳಿದ್ದೆವು… ಆದರೆ, ಕೆಲ ತಿಂಗಳುಗಳ ಹಿಂದೆ ಪುತ್ತೂರಿನ ಒಬ್ಬತಾ ಮಂಗಳೂರಿನಲ್ಲಿ ಇದೇ ರೀತಿ ಆಂಟಿಯ ಆಸೆಯಿಂದ ಹನಿಟ್ರ್ಯಾಪ್ ಗೆ ಬಲಿಯಾದ ಘಟನೆಯೂ ವರದಿಯಾಗಿತ್ತಾದರೂ, ಇಷ್ಟು ದೊಡ್ಡ ಮೊತ್ತದ ಹನಿಟ್ರ್ಯಾಪ್ ಪ್ರಕರಣ ಇದೇ ಮೊದಲು ಅನ್ನಿಸುತ್ತೆ…! ಹೆಣ್ಣಿನ ಹಿಂದೆ ಹೋದ ಅಸ್ಸಾಮಿ ಕಥೆ ಮಾತ್ರ ಶೋಚನೀಯ… ಹೆಣ್ಣು ಇಲ್ಲ… ಹಣ್ಣು ಇಲ್ಲ… ಆಲ್ ರೈಲ್…