Sunday, January 19, 2025
ಕಾಸರಗೋಡುಕ್ರೈಮ್ಸುದ್ದಿ

ಕಾಸರಗೋಡು ಉಳಿಯತ್ತಡ್ಕ ಪರಿಸರದ 14ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ; ಮುಹಮ್ಮದ್ ಹನೀಫ್ ಸಹಿತ ನಾಲ್ವರು ಕಾಮುಕರ ಬಂಧನ – ಕಹಳೆ ನ್ಯೂಸ್

ಕಾಸರಗೋಡು, ಜು 05 : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಉಳಿಯತ್ತಡ್ಕದ ಎ.ಕೆ ಮುಹಮ್ಮದ್ ಹನೀಫ್ (58), ಮಧೂರು ಚೇನೆಕ್ಕೋಡ್‌ನ ಸಿ. ಎ ಅಬ್ಬಾಸ್ (49), ಉಸ್ಮಾನ್ (55) ಮತ್ತು ಉಳಿಯತ್ತಡ್ಕ ಎಸ್. ಪಿ ನಗರದ ಸಿ. ಅಬ್ಬಾಸ್ (55) ಬಂಧಿತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳಿಯತ್ತಡ್ಕ ಪರಿಸರದ 14 ರ ಹರೆಯದ ಬಾಲಕಿಗೆ ಆಮಿಷ ತೋರಿಸಿ ಕರೆದೊಯ್ದು ಕೃತ್ಯ ನಡೆಸಲಾಗಿತ್ತು. ಜೂನ್ 26 ರಂದು ಕೃತ್ಯ ಬೆಳಕಿಗೆ ಬಂದಿತ್ತು.

ಕೆಲ ಸಮಯಗಳಿಂದ ಬಾಲಕಿಯನ್ನು ಹಲವೆಡೆಗೆ ಕರೆದೊಯ್ದು ಕೃತ್ಯ ನಡೆಸಿರುವುದಾಗಿ ಪ್ರಕರಣ ದಾಖಲಿಸಲಾಗಿದೆ. ಜೂನ್ 26 ರಂದು ಓರ್ವ ಆರೋಪಿ ನಿರ್ಜನ ಪ್ರದೇಶ ದ ಕಟ್ಟಡಕ್ಕೆ ಕರೆದೊಯ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಓರ್ವ ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದರು. ಬಳಿಕ ಬಾಲಕಿಯಿಂದ ಚೈಲ್ಡ್ ಲೈನ್ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದರು.

ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳಿದ್ದು, ಓರ್ವ ತಲೆ ಮರೆಸಿಕೊಂಡಿದ್ದಾನೆ.