Sunday, January 19, 2025
ಸುದ್ದಿ

ನ್ಯಾಯಬೆಲೆ ಅಂಗಡಿಗಳಲ್ಲೇ ಸಿಗಲಿದೆ 22 ನಾಗರಿಕ ಸೇವೆ.

ಬೆಂಗಳೂರು: ಅಕ್ಕಿ, ಗೋಧಿ, ರಾಗಿ, ಎಣ್ಣೆ, ಉಪ್ಪು… ಮತ್ತಿತರ ಪಡಿತರ ವಿತರಣೆಗಷ್ಟೇ ಸಮೀತವಾಗಿದ್ದ ರಾಜ್ಯದ ನ್ಯಾಯಬೆಲೆ ಅಂಗಡಿಗಳು ಇನ್ಮುಂದೆ ನಾಗರಿಕರ ದಿನನಿತ್ಯದ ಸೇವಾ ಕೇಂದ್ರಗಳಾಗಲಿವೆ.

ರಾಜ್ಯದ 23 ಸಾವಿರ ನ್ಯಾಯಬೆಲೆ ಅಂಗಡಿಗಳನ್ನು ಬಸ್ಸು, ರೈಲು, ವಿಮಾನ ಟಿಕೆಟ್ ಬುಕ್ಕಿಂಗ್ ಮಾಡುವ, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವ, ವಿದ್ಯುತ್ ಬಿಲ್, ನೀರಿನ ಬಿಲ್​ಗಳನ್ನು ಪಾವತಿಸುವ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರಿಗೆ ಸಂಬಂಧಿಸಿದ ಅರ್ಜಿಗಳನ್ನು ಭರ್ತಿ ಮಾಡುವುದೂ ಸೇರಿದಂತೆ 22 ಸೇವೆಗಳನ್ನು ಪಡೆಯುವ ಕೇಂದ್ರಗಳಾಗಿ ಮಾರ್ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪಡಿತರ ವಿತರಣಾ ಕೇಂದ್ರಗಳಿಗೆ ಱಸೇವಾ ಸಿಂಧು ಕೇಂದ್ರ’ಗಳೆಂದು ನಾಮಕರಣ ಮಾಡಲಾಗಿದ್ದು, ಈ ಸೇವೆ ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯ ಬೆಲೆ ಅಂಗಡಿಗಳಲ್ಲೂ ದೊರೆಯಲಿದೆ.
40 ಸಾವಿರ ಮೆ.ಟನ್ ಉಳಿತಾಯ!: ರಾಜ್ಯದಲ್ಲಿ 23 ಸಾವಿರ ನ್ಯಾಯ ಬೆಲೆ ಅಂಗಡಿಗಳಿದ್ದು, ಪಡಿತರ ವಿತರಣೆಯಲ್ಲಿ ಬಹುದೊಡ್ಡ ಅವ್ಯವಹಾರ ನಡೆಯುತ್ತಿದೆ. ಇದು ಅನ್ನಭಾಗ್ಯವಲ್ಲ, ಕನ್ನಭಾಗ್ಯ ಎಂದು ಪದೇ ಪದೆ ಪ್ರತಿಪಕ್ಷಗಳ ಆರೋಪಕ್ಕೆ ಗುರಿಯಾಗುತ್ತಿದೆ. ಹೀಗಾಗಿ ಈ ಕೇಂದ್ರಗಳನ್ನು ಸೇವಾ ಸಿಂಧು ಕೇಂದ್ರವಾಗಿಸುವುದರ ಮೂಲಕ ಶೇ.100ರಷ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ಅಳವಡಿಕೆಯಾಗಿ, ಧಾನ್ಯ ಅವ್ಯವಹಾರಕ್ಕೆ ಕಡಿವಾಣ ಬೀಳಲಿದೆ. ಈಗಾಗಲೆ ಪಿಒಎಸ್ ಅಳವಡಿಸಿಕೊಂಡಿರುವ ಅಂಗಡಿಗಳಿಂದಾಗಿಯೇ ಸರ್ಕಾರಕ್ಕೆ ಪ್ರತಿ ತಿಂಗಳು ಬರೊಬ್ಬರಿ 40ಸಾವಿರ ಮೆ.ಟನ್ ಅಕ್ಕಿ ಉಳಿತಾಯವಾಗುತ್ತಿದೆ. ಸರ್ಕಾರವೇ ಖಾಸಗಿ ಏಜೆನ್ಸಿ ಮೂಲಕ ಕಂಪ್ಯೂಟರ್, ಪ್ರಿಂಟರ್, ಬಯೋಮೆಟ್ರಿಕ್ ಉಪಕರಣ ಒಳಗೊಂಡ ಪಿಒಎಸ್ ಯಂತ್ರ ಅಳವಡಿಸುತ್ತದೆ. ಈ ಯಂತ್ರವನ್ನು ಕೇವಲ ಪಡಿತರ ವಿತರಣೆಗೆ ಮಾತ್ರ ಸೀಮಿತಗೊಳಿಸದೆ ನಾಗರಿಕರ ನಿತ್ಯದ ಹಲವು ಸೇವೆ ಒದಗಿಸಲು ಬಳಸಲಾಗುತ್ತದೆ.
ಮಾಲೀಕರಿಗೆ ತರಬೇತಿ: ಪಿಒಎಸ್ ಯಂತ್ರ ಬಳಸಿ ಯಾವ ಯಾವ ಸೇವೆಯನ್ನು ಹೇಗೆ ಒದಗಿಸಿಕೊಡಬಹುದು ಎಂಬುದರ ಕುರಿತು ಖಾಸಗಿ ಏಜೆನ್ಸಿ ಮೂಲಕವೇ ಅಂಗಡಿ ಮಾಲೀಕರಿಗೆ ತರಬೇತಿ ನೀಡಲಾಗುತ್ತದೆ. ಈ ಕೇಂದ್ರಗಳಿಗೆ ಸರ್ಕಾರವೇ ಪರವಾನಗಿ ದೊರಕಿಸಿಕೊಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೂರುಗಳ ಸಂಖ್ಯೆ ಕಡಿಮೆ :
ನ್ಯಾಯ ಬೆಲೆ ಅಂಗಡಿಗಳು ನಿತ್ಯವೂ ತೆರೆದಿರುವುದಿಲ್ಲ, ತಿಂಗಳಲ್ಲಿ ಎರಡು ಅಥವಾ ಮೂರು ದಿನವಷ್ಟೇ ಪಡಿತರ ವಿತರಿಸಲಾಗುತ್ತದೆ. ಕೆಲವರಿಗೆ ಪಡಿತರವೇ ಸಿಗುವುದಿಲ್ಲ ಎಂಬ ದೂರಿಗೂ ಪಿಒಎಸ್ ಅಳವಡಿಕೆಯಿಂದ ಕಡಿವಾಣ ಬಿದ್ದಿದೆ. ಅಂಗಡಿಯನ್ನು ಯಾವ ದಿನ, ಎಷ್ಟು ಗಂಟೆಗೆ ತೆರೆಯಲಾಗಿದೆ, ಎಷ್ಟು ಕಾರ್ಡ್​ಗೆ ಎಷ್ಟು ಪಡಿತರ ವಿತರಿಸಲಾಗಿದೆ ಎಂಬ ಮಾಹಿತಿ ಕರಾರುವಾಕ್ಕಾಗಿ ಸಿಗುತ್ತದೆ. ಹಾಗಾಗಿ ಜನಸಾಮಾನ್ಯರಿಗೆ ಉತ್ತಮ ಸೇವೆಯೂ ಸಿಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2 ಹಂತದಲ್ಲಿ ಜಾರಿ :

ಯೋಜನೆ 2 ಹಂತದಲ್ಲಿ ಜಾರಿಯಾಗಲಿದೆ. ಮೊದಲಿಗೆ ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರ ಅಳವಡಿಸಿ ಕೊಳ್ಳದ ಸುಮಾರು 10 ಸಾವಿರ ಪಡಿತರ ವಿತರಣಾ ಕೇಂದ್ರಗಳು ಸೇವಾಸಿಂಧು ಕೇಂದ್ರಗಳಾಗಲಿವೆ. ಆರು ತಿಂಗಳಲ್ಲಿ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಉಳಿದ 13 ಸಾವಿರ ಅಂಗಡಿಗಳನ್ನು ಎರಡನೇ ಹಂತದಲ್ಲಿ ಉನ್ನತೀಕರಿಸಲಾಗುತ್ತದೆ.

15-20 ಸಾವಿರ ರೂ. ಲಾಭ
ಸೇವಾ ಸಿಂಧು ಕೇಂದ್ರ ಗಳಾಗಿ ಉನ್ನತೀಕರಿ ಸಲ್ಪಡುವ ನ್ಯಾಯ ಬೆಲೆ ಅಂಗಡಿ ಮಾಲೀಕರು ಪಡಿತರ ವಿತರಣೆ ಕಮೀಷನ್ ಬಿಟ್ಟು ತಿಂಗಳಿಗೆ 15-20 ಸಾವಿರ ರೂ. ಲಾಭ ಗಳಿಸಬಹುದು.
ರಾಜ್ಯದಲ್ಲಿ 1.10ಕೋಟಿ ಬಿಪಿಎಲ್ ಕುಟುಂಬಗಳು ಅನ್ನ ಭಾಗ್ಯ ಯೋಜನೆ ಪ್ರಯೋಜನ ಪಡೆಯುತ್ತಿವೆ. ಈ ಸೇವೆಯಲ್ಲಿ ಅಕ್ರಮ ನಡೆಯಬಾರದೆಂಬ ಉದ್ದೇಶದಿಂದ ಸರ್ಕಾರ ಪಿಒಎಸ್ ಯಂತ್ರ ಅಳವಡಿಸುತ್ತಿದೆ. ಇದೇ ಯಂತ್ರ ಬಳಸಿಕೊಂಡು ಇತರೆ ಸೇವೆ ಒದಗಿಸಲು ನ್ಯಾಯ ಬೆಲೆ ಅಂಗಡಿಗಳನ್ನು ‘ಸೇವಾ ಸಿಂಧು ಕೇಂದ್ರ’ಗಳಾಗಿ ಉನ್ನತೀಕರಿಸಲಾಗುವುದು. ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ.

Leave a Response