Recent Posts

Monday, January 20, 2025
ರಾಷ್ಟ್ರೀಯಸಿನಿಮಾಸುದ್ದಿ

ಭಾರತೀಯ ಸೇನೆಯಿಂದ ಖ್ಯಾತ ನಟಿ ವಿದ್ಯಾ ಬಾಲನ್‍ಗೆ ಅತ್ಯುನ್ನತ ಗೌರವ ; ಯಾಕೆ ಗೊತ್ತಾ…!? ಈ ವರದಿ ನೋಡಿ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್‍ಗೆ ಭಾರತೀಯ ಸೇನೆ ಅತ್ಯುನ್ನತ ಗೌರವವನ್ನು ಸಲ್ಲಿಸಿದೆ. ವಿದ್ಯಾ ಬಾಲನ್ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗೌರವಿಸಿ ಭಾರತೀಯ ಸೇನೆಯು ನಟಿಗೆ ವಿಭಿನ್ನವಾಗಿ ಗೌರವ ಸಮರ್ಪಿಸಿದೆ. ಸೈನಿಕರು ಫೈರಿಂಗ್ ತರಬೇತಿ ಪಡೆಯುವ ಸ್ಥಳ ಕಾಶ್ಮೀರದ ಗುಲ್ಬಾರ್ಗ್‍ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್‍ಗೆ ವಿದ್ಯಾ ಬಾಲನ್ ಹೆಸರನ್ನು ನಾಮಕರಣ ಮಾಡಲಾಗಿದೆ.

ಮಿಲಿಟರಿ ಫೈರಿಂಗ್ ರೇಂಜ್‍ಗೆ ವಿದ್ಯಾ ಬಾಲನ್ ಹೆಸರು ನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ವಿದ್ಯಾ ಬಾಲನ್‍ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ವಿದ್ಯಾ ಬಾಲನ್ ವೃತ್ತಿ ಜೀವನದಲ್ಲಿ ಇದು ಅತ್ಯಂತ ಹೆಮ್ಮೆಯ ವಿಚಾರ ಎಂದು ಶ್ಲಾಘಿಸುತ್ತಿದ್ದಾರೆ. ಆದರೆ ಈ ಬಗ್ಗೆ ವಿದ್ಯಾ ಬಾಲನ್ ಸಾರ್ವಜನಿಕವಾಗಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಆಯೋಜಿಸಿದ್ದ `ಗುಲ್ಬರ್ಗ್ ವಿಂಟರ್ ಫೆಸ್ಟಿವಲ್’ನಲ್ಲಿ ನಟಿ ವಿದ್ಯಾ ಬಾಲನ್ ಪತಿ ಸಿದ್ದಾರ್ಥ್ ರಾಯ್ ಕಪೂರ್ ಜೊತೆ ಪಾಲ್ಗೊಂಡಿದ್ದರು.

ಇತ್ತೀಚೆಗಷ್ಟೇ ವಿದ್ಯಾ ಬಾಲನ್ ಅಭಿನಯದ `ಶೆರ್ನಿ’ ಸಿನಿಮಾ ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅರಣ್ಯಾಧಿಕಾರಿ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದು, ವಿದ್ಯಾ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದರೊಂದಿಗೆ ಆಸ್ಕರ್ ಆಡಳಿತ ಮಂಡಳಿಯ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ &  ಸೈನ್ಸ್‌ನಲ್ಲಿ ಕಾರ್ಯನಿರ್ವಾಹಕ ಸದಸ್ಯರ ಹೊಸ ಬ್ಯಾಚ್‍ಗೆ ವಿದ್ಯಾ ಬಾಲನ್ ಆಯ್ಕೆಯಾಗಿದ್ದರು. ವಿದ್ಯಾ ಬಾಲನ್ ಜೊತೆಗೆ ನಿರ್ಮಾಪಕರಾದ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್‌ಗೂ ಆಹ್ವಾನ ಬಂದಿದೆ.